Health Tips: ಇಂದಿನ ಕಾಲದಲ್ಲಿ ಜೀನ್ಸ್ ಧರಿಸದ ಹುಡುಗಿಯರು ಸಿಗೋದು ತುಂಂಬಾ ಅಪರೂಪ. ಯಾಕಂದ್ರೆ ಫ್ಯಾಷನ್ ಅನ್ನೋದು ಇಂದಿನ ಹೆಣ್ಣುಮಕ್ಕಳ ಜೀವನದ ಭಾಗವಾಗಿದೆ. ಫ್ಯಾಷನ್ ಅನ್ನೋದು ಮುಖ್ಯ ಅನ್ನೋದು ಎಷ್ಟು ನಿಜವೋ, ಅದರಿಂದ ನಮ್ಮ ಆರೋಗ್ಯವೂ ಹಾಳಾಗುತ್ತದೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿ ಇಂದು ನಾನು ದೇಹಕ್ಕೆ ಟೈಟ್ ಆಗುವ ಜೀನ್ಸ್ ಧರಿಸಿದರೆ, ಏನೇನು ಸಮಸ್ಯೆ ಉದ್ಭವಿಸುತ್ತದೆ ಅಂತಾ ತಿಳಿಯೋಣ ಬನ್ನಿ..
ಜೀನ್ಸ್ ದಪ್ಪ ಉಡುಪಾಗಿದ್ದು, ಇದು ಮೈಗಂಟಿಕ“ಳ್ಳುವಂತೆ ಹಾಕಿದರೆ, ಇದರಿಂದ ಚರ್ಮಕ್ಕೆ ಗಾಳಿ ತಾಕುವುದು ನಿಲ್ಲುತ್ತದೆ. ಚರ್ಮಕ್ಕೆ ಗಾಳಿ ತಾಕದಿದ್ದಲ್ಲಿ, ತುರಿಕೆ, ಕಿರಿಕಿರಿ ಉಂಟಾಗುತ್ತದೆ. ಅಲ್ಲದೇ ದೇಹದ ದುರ್ಗಂಧ ಹೆಚ್ಚಾಗುತ್ತದೆ.
ಅಲ್ಲದೇ ಜೀನ್ಸ್ ಬಿಗಿಯಾಗಿದ್ದರೆ, ದೇಹದಲ್ಲಿ ರಕ್ತ ಸಂಚಲನೆಗೂ ಅಡಚಣೆ ಉಂಟಾಗುತ್ತದೆ. ಹಾಗಾಗಿ ನೀವು ನಿರಂತರವಾಗಿ ಬಿಗಿಯಾಗಿರುವ ಜೀನ್ಸ್ ಧರಿಸಿದರೆ, ನಿಮ್ಮ ಆರೋಗ್ಯ ಕ್ರಮೇಣ ಹಾಳಾಗುತ್ತದೆ. ಹಾಗಾಗಿ ಯಾವುದೇ ಉಡುಪಾಗಲಿ, ಗಾಳಿಯಾಡುವಂತೆ ಹಾಕಬೇಕು. ಇದು ಧರಿಸಲು ಹಾಯಾಗಿದ್ದು, ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾಗಿಯೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸೆಲೆಬ್ರಟಿಗಳು ಕೂಡ ಇಗೀಗ ಲೂಸ್ ಆಗಿರುವ ಉಡುಪನ್ನೇ ಧರಿಸಲು ಇಚ್ಛಿಸುತ್ತಿದ್ದಾರೆ.
ಅಲ್ಲದೇ ನಮ್ಮ ಜೀರ್ಣಕ್ರಿಯೆ ನಿಧಾನ ಆಗುವಂತೆ ಮಾಡಿ, ಉದರ ಸಮಸ್ಯೆ ಉದ್ಭವಿಸುವ ಎಲ್ಲಾ ಸಾಧ್ಯತೆಗಳು ಈ ಬಿಗಿಯಾದ ಜೀನ್ಸ್ ಧರಿಸುವುದರಿಂದ ಬರುತ್ತದೆ. ಅಲ್ಲದೇ ಮನುಷ್ಯನಿಗೆ ಎಷ್ಟು ಬೆವರು ಬರುತ್ತದೆಯೋ, ಅವರು ಅಷ್ಟು ಆರೋಗ್ಯವಂತನಾಗಿರುತ್ತಾನೆ. ಆದರೆ ಬಿಗಿಯಾದ ಉಡುಪು ಧರಿಸಿದರೆ, ಬೆವರು ಬಾರದೇ, ಆರೋಗ್ಯವೂ ಹಾಳಾಗುತ್ತದೆ.
ಜೀನ್ಸ್ ಪ್ರತಿದಿನ ವಾಶ್ ಮಾಡುವುದಿಲ್ಲ. ಹಾಗಾಗಿ ಅದರಲ್ಲಿರುವ ಗಲೀಜಿನಿಂದಲೂ ಸೋಂಕಾಗಬಹುದು. ಹಾಗಾಗಿ 1 ರಿಂದ 2 ಬಾರಿ ಜೀನ್ಸ್ ಧರಿಸಿದರೆ, ಅದನ್ನು ವಾಶ್ ಮಾಡಲೇಬೇಕು.