Tuesday, October 14, 2025

Latest Posts

Health Tips: ಊಟ ಹೋಗ್ಬೇಕಾ? ಉಸಿರು ಹೋಗ್ಬೇಕಾ?: ಭಗವದ್ಗೀತೆ ರೋಗ ನಿವಾರಿಸುತ್ತೆ!

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ಇರುವ ಆರೋಗ್ಯ ಸಮಸ್ಯೆ ಅಂದ್ರೆ, ಅದು ಗ್ಯಾಸ್ಟಿಕ್ ಸಮಸ್ಯೆ. ಈ ಸಮಸ್ಯೆ ಕಾಮನ್ ಆಗಿದ್ದರೂ, ಇದು ಗಂಭೀರ ಸಮಸ್ಯೆ ಅಂತಾರೆ ವೈದ್ಯರು.

ಶ್ವಾಸಕೋಶದ ಸಮಸ್ಯೆ ಬಗ್ಗೆ ಈಗಾಗಲೇ ವೈದ್ಯರಾಗಿರುವ ಡಾ.ಭವ್ಯ ಅವರು ವಿವರಿಸಿದ್ದಾರೆ. ನಮಗೆ ಶೀತ, ಕೆಮ್ಮು ಬಂದಾಗ, ಶ್ವಾಸಕೋಶದ ಸಮಸ್ಯೆ ಕಾಣಿಸಬಹುದು. ಅದೇ ರೀತಿ ಸ್ಮೋಕ್ ಮಾಡಿದಾಗ, ಧೂಳಲ್ಲಿ ಓಡಾಡಿದಾಗ ಹೀಗೆ ಹಲವು ಕಾರಣಗಳಿಂದ ಉಸಿರಾಟದ ಸಮಸ್ಯೆ ಕಾಣಿಸಿಕ“ಳ್ಳುತ್ತದೆ. ಆದರೆ ಉದರದ ಸಮಸ್ಯೆ ಬಂದಾಗಲೂ ನಾವು ಶ್ವಾಸಕೋಶದ ಸಮಸ್ಯೆಗೆ ತುತ್ತಾಗಬಹುದು ಅಂತಾರೆ ವೈದ್ಯರು.

ಏಕೆಂದರೆ ಹಲವರಿಗೆ ಆ್ಯಸಿಡಿಟಿ ಸಮಸ್ಯೆ ಇರುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಮಲಬದ್ಧತೆ ಸಮಸ್ಯೆ ಹೀಗೆ ಉದರ ಸಮಸ್ಯೆ ಹಲವಾರು ಇರುತ್ತದೆ. ಇಂಥ ಸಮಸ್ಯೆಯಿಂದಲೂ ನಾವು ಉಸಿರಾಡಲು ಕಷ್ಟವಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.

ಹಾಗಾಗಿ ನೀವು ಉಸಿರಾಟದ ಸಮಸ್ಯೆ ಎಂದು ವೈದ್ಯರ ಬಳಿ ಹೋದಾಗ, ವೈದ್ಯರು ಶ್ವಾಸಕೋಶದ ಜತೆಗೆ ಉದರದ ಪರೀಕ್ಷೆಯನ್ನೂ ಮಾಡುತ್ತಾರೆ. ಏಕೆಂದರೆ ನಾವು ಸೇವಿಸಿದ ಆಹಾರ ಉದರಕ್ಕೆ ಹೋಗುವ ಬದಲು, ಶ್ವಾಸಕೋಶಕ್ಕೆ ಹೋಗಿರುವ ಸಾಧ್ಯತೆ ಇರುತ್ತದೆ. ಅಲ್ಲದೇ, ಚಿಕ್ಕ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಬಹುದು. ಹಾಗಾಗಿ ಅವರಿಗೆ ಮೆತ್ತಗಿನ ಆಹಾರವನ್ನೇ ನೀಡಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss