Health Tips: ಇಂದಿನ ಜೀವನ ವಿಧಾನದಿಂದ, ಹಲವು ಸಮಸ್ಯೆ, ಮಾನಸಿಕವಾಗಿ ನೆಮ್ಮದಿ ಇಲ್ಲದ ಕಾರಣ, ಹಲವರು ನಿದ್ರಾಹೀನತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಥವರು ಹಣ್ಣಿನ ಸೇವನೆ ಮೂಲಕವೂ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಕಂಡುಕ“ಳ್ಳಬಹುದು ಅಂತಾ ಕೆಲವರು ಹೇಳ್ತಾರೆ. ಈ ಹಣ್ಣು ತಿಂದ್ರೆ ಚೆನ್ನಾಗಿ ನಿದ್ರೆ ಬರತ್ತೆ ಅಂತಾನೂ ಹೇಳ್ತಾರೆ. ಹಾಗಾದ್ರೆ ಇದೆಲ್ಲ ಸತ್ಯವಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ವೈದ್ಯರು ಹೇಳುವ ಪ್ರಕಾರ ನಮ್ಮ ಬ್ರೈನ್ ಲೈಬ್ರರಿ ಇದ್ದ ಹಾಗೆ. ಬುಕ್‌ಗಳನ್ನು ಲೈಬ್ರರಿಯಲ್ಲಿ ಹೇಗೆ ಜೋಡಿಸಿ ಇಡಲಾಗತ್ತೋ, ಆ ರೀತಿ ನಮ್ಮ ಬ್ರೈನ್‌ನಲ್ಲಿ ನಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಸಹ ಜೋಡಿಸಲಾಗುತ್ತದೆ. ಹಾಗೆ ಜೋಡಿಸುವ ಕೆಲಸವಾಗೋದೇ ನಾವು ಮಲಗಿದಾಗ. ಹಾಗಾಗಿ ನಮಗೆ ಸರಿಯಾದ ನಿದ್ದೆ ಬೇಕು.
ಯಾರಿಗೆ ಸರಿಯಾದ ಸಮಯಕ್ಕೆ, ಸರಿಯಾಗಿ ನಿದ್ರೆ ಮಾಡಲಾಗುವುದಿಲ್ಲೋ, ಅಂಥವರಿಗೆ ಕಿರಿಕಿರಿಯುಂಟಾಗುತ್ತದೆ. ಹಾಗಾದ್ರೆ ಆರೋಗ್ಯಕರ ನಿದ್ದೆ ಬೇಕು ಅಂದ್ರೆ ಏನು ಮಾಡಬೇಕು ಅಂದ್ರೆ, ನಾವು ಪ್ರತಿದಿನ 1 ಟೈಮ್ ಫಿಕ್ಸ್ ಮಾಡಿರಬೇಕು. ಮತ್ತು ಏನೇ ಆದರೂ ನಾವು ಅದೇ ಸಮಯಕ್ಕೆ ಮಲಗಬೇಕು. ಆಗ ನಮಗೆ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.