Friday, August 29, 2025

Latest Posts

Health Tips: ಪಿಸಿಓಡಿ ಇದ್ದರೆ ಈ ಮೂರು P ಬಗ್ಗೆ ಗಮನ ನೀಡಿ

- Advertisement -

Health Tips: ಪಿಸಿಓಡಿ ಅನ್ನೋದು ಕಾಮನ್ ಸಮಸ್ಯೆಯಾಗಿಬಿಟ್ಟಿದೆ. ಆದರೆ ಇದನ್ನು ಅಷ್ಟು ಸುಲಭವಾಗಿ ಸ್ವೀಕರಿಸಬೇಡಿ. ಬದಲಾಗಿ ಇದರ ಬಗ್ಗೆ ಆದಷ್ಟು ಗಮನ ನೀಡಿ, ಪರಿಹಾರ ಕಂಡುಕ“ಳ್ಳಿ. ಈ ಪಿಸಿಓಡಿಯಿಂದಲೇ ಸಂತಾನ ಹೀನತೆ, ಅನಾರೋಗ್ಯಕರ ತೂಕ ಹೆಚ್ಚಳ ಇತ್ಯಾಾದಿ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ಇದನ್ನು ಕಡೆಗಣಿಸುವಂತಿಲ್ಲ.

  1. ಪಿ1 ಅಂದ್ರೆ ಪುವರ್ ನ್ಯೂಟ್ರಿಶಿಯನ್. ನೀವು ಸೇವಿಸುವ ಆಹಾರದಲ್ಲಿ ಪೋಷಕಾಂಶವಿಲ್ಲ ಎಂದಲ್ಲಿ, ನಿಮ್ಮ ಪಿಸಿಓಡಿ ಸಮಸ್ಯೆ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಜಂಕ್ ಫುಡ್, ಬೇಕರಿ ತಿಂಡಿ, ಕರಿದ ಆಹಾರ ಸೇವನೆ ನಿಲ್ಲಿಸಿಬಿಡಿ. ಸಲಾಡ್, ಫ್ರೂಟ್ಸ್, ಡ್ರೈಫ್ರೂಟ್ಸ್, ಧವಸ-ಧಾನ್ಯಗಳ ಸೇವನೆ ಮಾಡಿ. ಪೋಷಕಾಂಶವಿರುವ ತರಕಾರಿ, ಹಣ್ಣು ಸೇವಿಸಿ. ಮೈದಾ ಮತ್ತು ಸಕ್ಕರೆ ಸೇವನೆ ತ್ಯಜಿಸಿ.
  2. ಪಿ2 ಅಂದ್ರೆ ಪುವರ್ ಸ್ಲೀಪ್. ಚೆನ್ನಾಗಿ ನಿದ್ದೆ ಮಾಡದೇ, ಲೇಟಾಗಿ ಮಲಗಿ, ಲೇಟಾಗಿ ಏಳುವುದು. ಲೇಟಾಗಿ ಮಲಗಿ ಬೇಗ ಏಳುವುದು ಎರಡೂ ಆರೋಗ್ಯಕ್ಕೆ ಮಾರಕ. ಹಾಗಾಗಿ ಬೇಗ ಮಲಗಿ, ಬೇಗ ಏಳಿ. ದಿನಕ್ಕೆ 8 ತಾಸು ನಿದ್ರಿಸಿ. ಇದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಿದ್ರಾಹಿನತೆ ಸಮಸ್ಯೆಯಿಂದಲೂ ಪಿಸಿಓಡಿ ಸಮಸ್ಯೆ ಹೆಚ್ಚಾಗುತ್ತದೆ.
  3. ಪಿ3 ಅಂದ್ರೆ ಪ್ಯಾಸಿವ್ ಲಿವಿಂಗ್ . ಅಂದ್ರೆ ಆಲಸ್ಯದ ಜೀವನ. ನೀವು ಸದಾಕಾಲ ಆ್ಯಕ್ಟೀವ್ ಇದ್ದಷ್ಟು, ಆರೋಗ್ಯವಾಗಿರುತ್ತೀರಿ. ನೀವು ಯಾವಾಗ ಆಲಸ್ಯದಿಂದ ಇರುತ್ತೀರೋ. ಆವಾಗ ನಿಮ್ಮ ಆರೋಗ್ಯವೂ ಹಾಳಾಗುತ್ತದೆ. ಅನಾರೋಗ್ಯಕರ ತೂಕ ಹೆಚ್ಚಾಗುತ್ತದೆ. ಪಿಸಿಓಡಿ ಸಮಸ್ಯೆಯೂ ಉಲ್ಬಣಿಸುತ್ತದೆ. ಹಾಗಾಗಿ ಆದಷ್ಟು ಆ್ಯಕ್ಟೀವ್ ಆಗಿರಿ. ವಾಕಿಂಗ್, ವ್ಯಾಯಾಮ್, ಡಾನ್ಸ್, ಸೈಕ್ಲಿಂಗ್, ಹರಟುವುದು, ಹಾಡುವುದು, ಹೀಗೆ ಮನಸ್ಸಿಗೆ ಖುಷಿ ನೀಡುವ ಕೆಲಸದಲ್ಲಿ ನಿರತರಾಗಿ.
- Advertisement -

Latest Posts

Don't Miss