Tuesday, August 5, 2025

Latest Posts

Health Tips : ಮಳೆಗಾಲದಲ್ಲಿ ಕಾಡೋ ಬೆರಳಿನ ಊತಕ್ಕೆ ಮನೆ ಮದ್ದು ಇಲ್ಲಿದೆ…!

- Advertisement -

Health News : ಮಳೆಗಾಲ ಸ್ವಲ್ಪ ಖುಷಿ ನೀಡಿದರೂ ಅದರ ಹಿಂದೆ ಅನಾರೋಗ್ಯ ಕೂಡಾ ನಮ್ಮನ್ನು ಅರಸಿ ಬರುತ್ತೆ. ಮಳೆಗಾಲದಲ್ಲಿ ಹೆಚ್ಚಾಗಿ ಚರ್ಮ ರೋಗದ ಜೊತೆ ಬೆರಳಿನ ಊತಗಳು ಕಂಡು ಬರುತ್ತವೆ. ಹಾಗಂತ ಇದಕ್ಕೆ ಚಿಂತೆ ಮಾಡೋ ಅಗತ್ಯ ಇಲ್ಲ  ಯಾಕೆಂದರೆ ಈ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು ಅದು ಏನು ಅಂತೀರಾ ಈ ಸ್ಟೋರಿ ನೋಡಿ……………….

ಮನೆಯಲ್ಲಿಯೇ ನೈಸರ್ಗಿಕವಾಗಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಬಳಕೆ ಮಾಡಿಕೊಂಡು, ಬೆರವಳಿನ ಊತವನ್ನು ಕಡಿಮೆ ಮಾಡಬಹುದು.

ಈರುಳ್ಳಿ ರಸ ಹಚ್ಚಿದ್ರೆ ಉತ್ತಮ :

ಪ್ರತಿದಿನ ಸಣ್ಣ ಪೀಸ್ ಹಸಿ ಈರುಳ್ಳಿಯನ್ನು ತಿನ್ನುವು ದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ .

ಈರುಳ್ಳಿ ಯಲ್ಲಿ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋ ರಾಡುವ ಪಾಲಿ ಫಿನಲ್ ಎಂಬ ಪ್ರಬಲ ಆಂಟಿ ಆಕ್ಸಿ ಡೆಂಟ್ ಸಿಗುವುದರ ಜೊತೆಗೆ, ಆಂಟಿ ಬಯೋಟಿಕ್ ಹಾಗೂ ಆಂಟಿಸೆಪ್ಟಿಕ್ ಗುಣಲಕ್ಷಣಗಳು ಕೂಡ, ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ದೇಹದಲ್ಲಿ ರಕ್ತ ಸಂಚಾರವನ್ನು ಅಭಿವೃದ್ಧಿಪಡಿಸುತ್ತದೆ.

ಇವೆಲ್ಲಾ ಆರೋಗ್ಯ ಗುಣಲಕ್ಷಣಗಳನ್ನು ಒಳಗೊಂಡಿ ರುವ ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ಬೆರಳುಗಳಲ್ಲಿ ಊತ ಕಂಡು ಬಂದಿರುವ ಕಡೆಗೆಲ್ಲಾ ಚೆನ್ನಾಗಿ ಹಚ್ಚಿದರೆ ರೋಗ ಪರಿಹಾರವಾಗುವುದು.

ನಿಂಬೆ ಹಣ್ಣಿನ ರಸ ಈ ಸಮಸ್ಯೆಗೆ ಉತ್ತಮ ಔಷಧಿ:

ನಿಂಬೆ ಹಣ್ಣಿನ ರಸ ಎಂದರೆ, ಒಂದು ಲೋಟ ನೀರಿಗೆ ಒಂದು ಮಧ್ಯಮ ಗಾತ್ರದ ನಿಂಬೆ ಹಣ್ಣಿನ ರಸವನ್ನು ಹಿಂಡಿ ಅದಕ್ಕೆ ಸ್ವಲ್ಪ ಸಕ್ಕರೆ ಮತ್ತು ಜೇನು ತುಪ್ಪ ಬೆರೆಸಿ ಕುಡಿಯುವುದು ಉತ್ತಮ. ಇದು ಬೆರಳುಗಳ ಊತದ ಸಮಸ್ಯೆಯನ್ನು ದೂರ ಮಾಡುತ್ತದೆ.

ಇದಕ್ಕೆ ಪ್ರಮುಖ ಕಾರಣ ಈ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಸಿ ಅಂಶದ ಜೊತೆಗೆ, ಇದರಲ್ಲಿರುವ ಆಂಟಿ – ಮೈಕ್ರೋಬಿಯಲ್ ಗುಣ .ಹೀಗಾಗಿ ಒಂದು ಮಧ್ಯಮ ಗಾತ್ರದ ನಿಂಬೆ ಹಣ್ಣನ್ನು, ಅರ್ಧಕ್ಕೆ ಕತ್ತರಿಸಿ ಅದರ ರಸವನ್ನು ಊತ ಬಂದಿರುವ ಬೆರಳುಗಳ ಮೇಲೆ ಅನ್ವಯಿಸಿದರೆ ಸಮಸ್ಯೆಗಳಿಗೆ ಪರಿ ಹಾರ ಕಾಣಬಹುದು.

ಸಾಸಿವೆ ಎಣ್ಣೆ ಉತ್ತಮ :

ಸಾಸಿವೆ ಎಣ್ಣೆಯಲ್ಲಿ ಪ್ರಬಲ ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಮೃದ್ಧ ವಾಗಿರುವುದರಿಂದ, ಮಳೆಗಾಲದಲ್ಲಿ ಕೈಬೆರಳುಗಳ ಊದಿಕೊಂಡಿರುವ ಸಮಸ್ಯೆಯನ್ನು ದೂರ ಮಾಡುವಲ್ಲಿ ನೆರವಿಗೆ ಬರುತ್ತದೆ.

ಸಾಸಿವೆ ಎಣ್ಣೆ ಹೇಗೆ ಬಳಸಬಹುದು ಅಂದರೆ

ಒಂದು ಟೇಬಲ್ ಚಮಚ ಆಗುವಷ್ಟು ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಅರ್ಧ ಟೀ ಚಮಚದಷ್ಟು ಕರಿಮೆಣಸಿನ ಪುಡಿಯನ್ನು ಸೆರಿಸಿ. ಎರಡು ನಿಮಿಷದವರೆಗೆ ಬಿಸಿ ಮಾಡಿಕೊಳ್ಳಿ.

ಈ ಎಣ್ಣೆ ತಣ್ಣಗಾದ ಬಳಿಕ, ಇದನ್ನು ಊದಿಕೊಂಡಿರುವ ಬೆರಳುಗಳ ಭಾಗಕ್ಕೆ ಅನ್ವಯಿಸಿ, ನಿಧಾನಕ್ಕೆ ಮಸಾಜ್ ಮಾಡಿ. ಹೀಗೆ ಪ್ರತಿದಿನ ಮಾಡುತ್ತಾ ಬರುವುದರಿಂದ ಸಮಸ್ಯೆಗೆ ಪರಿಹಾರ ಕಾಣಬಹುದು.​ಹರಳೆಣ್ಣೆಯಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು, ಹೇರ ಳವಾಗಿ ಕಂಡು ಬರುತ್ತದೆ. ಹೀಗಾಗಿ ಕೈಗಳ ಬೆರಳುಗಳಲ್ಲಿ ಊತದ ಸಮಸ್ಯೆ ಇದ್ದವರು, ಈ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಊತ ಕಂಡು ಬರುವ, ಬೆರಳುಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡು ವುದರಿಂದ, ಕೈಬೆರಳುಗಳ ಊತದ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು.

ನೆಲ್ಲಿಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ನೀವೂ ತಿಳಿಯಿರಿ..

ಡಾರ್ಕ್ ಚಾಕೋಲೇಟ್ ಸೇವನೆ ಎಷ್ಟು ಮಾಡಬೇಕು..? ಇದರಿಂದಾಗುವ ಆರೋಗ್ಯ ಲಾಭವೇನು..?

ಜೀವನದಲ್ಲಿ ಖುಷಿಯಾಗಿರಬೇಕು ಅಂದ್ರೆ ಈ ಸೂತ್ರವನ್ನು ಅನುಸರಿಸಿ..

 

- Advertisement -

Latest Posts

Don't Miss