Friday, August 29, 2025

Latest Posts

Health Tips: ಕ್ರೀಮ್ ಬಿಸ್ಕೇಟ್‌ ಮಕ್ಕಳಿಗೆ ನೀಡುವ ಮುನ್ನ ಇದನ್ನು ಓದಿ

- Advertisement -

Health Tips: ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕೇಕ್, ಕ್ರೀಮ್ ಬೇಸ್ಕೇಟ್, ಕುಕೀಸ್, ಚಾಕೋಲೇಟ್ಸ್, ಪಿಜ್ಜಾ, ಬರ್ಗರ್ ಎಲ್ಲವೂ ಇದೆ. ಆದರೆ ಇದ್ಯಾವುದು ಆರೋಗ್ಯಕ್ಕೆ ಉತ್ತಮವಲ್ಲ. ಅದರಲ್ಲೂ ಆ್ಯಡ್ ನೋಡಿ ನೀವೇನಾದ್ರೂ ಮಗುವಿಗೆ ತಿನ್ನೋಕ್ಕೆ ಕ್ರೀಮ್ ಬಿಸ್ಕೇಟ್ ನೀಡಿದ್ರೆ, ಅದು ಆ ಮಗುವಿನ ಆರೋಗ್ಯ ಸುಧಾರಿಸುವುದಿಲ್ಲ. ಬದಲಾಗಿ ಆರೋಗ್ಯವನ್ನು ಹಾಳು ಮಾಡುತ್ತದೆ.

ಆ್ಯಡ್‌ನಲ್ಲಿ ಮಕ್ಕಳಿಗೆ ಬೇಕಾದ ಪೋಷಕಾಂಶ, ಹಾಲು, ಡ್ರೈಫ್ರೂಟ್ಸ್ ಎಲ್ಲವೂ ಈ ಬಿಸ್ಕೇಟ್‌ನಲ್ಲಿರತ್ತೆ. ಮಗುವಿಗೆ ಈ ಬಿಸ್ಕೇಟ್ ನೀಡಿದ್ರೆ, ಶಕ್ತಿ ಬರತ್ತೆ ಅಂತೆಲ್ಲಾ ಹೇಳ್ತಾರೆ. ಆದರೆ ಅಸಲಿಯತ್ತೇ ಬೇರೆಯಾಗಿರತ್ತೆ. ಕ್ರೀಮ್ ಬಿಸ್ಕೇಟ್‌ನಲ್ಲಿ ಯಾವ ಶಕ್ತಿಯೂ ಇರುವುದಿಲ್ಲ, ಪೋಷಕಾಂಶವೂ ಇರುವುದಿಲ್ಲ.

ಇದರಲ್ಲಿರುವ ಕ್ರೀಮ್‌ನಲ್ಲಿ ಹಾಲಿನ ಸತ್ವವೇ ಇರೋದಿಲ್ಲ. ಎಣ್ಣೆ, ಆರ್ಟಿಫಿಶಿಯಲ್ ಫ್ಲೇವರ್ಸ್, ಸಕ್ಕರೆ ಮತ್ತು ಸಿಂಥೆಟಿಕ್ ಕಲರ್ ಬಳಸಿ, ಈ ಕ್ರೀಮ್ ಮಾಡಿರುತ್ತಾರೆ. ಆದರೆ ಆ್ಯಡ್‌ನಲ್ಲಿ ಹಾಲಿನಿಂದ ಮಾಡಿದ್ದೆಂದೇ ತೋರಿಸುತ್ತಾರೆ.

ನೀವೇನಾದರೂ ನಿಮ್ಮ ಮಕ್ಕಳಿಗೆ ಪ್ರತಿದಿನ ಈ ಕ್ರೀಮ್ ಬಿಸ್ಕೇಟ್ ನೀಡಿದ್ರೆ, ಅದರಿಂದ ಅವರ ತೂಕ ಹೆಚ್ಚುತ್ತದೆ. ಬೇಡದ ಅಂಶ ದೇಹ ಸೇರಿ, ಆರೋಗ್ಯ ಕೆಡುತ್ತದೆ. ಹಲ್ಲು ಹಾಳಾಗುತ್ತದೆ. ಸಣ್ಣ ವಯಸ್ಸಿಗೆ ಶುಗರ್ ಕೂಡ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳಿಗೆ ಈ ಕ್ರೀಮ್ ಬಿಸ್ಕೇಟ್ ಸೇವನೆಯ ಅಭ್ಯಾಸ ಮಾತ್ರ ಮಾಡಬೇಡಿ. ನೀವೇ ಮನೆಯಲ್ಲಿ ಆರೋಗ್ಯಕರ ಕುಕೀಸ್ ತಯಾರಿಸಿ, ತಿನ್ನಿಸಿ.

- Advertisement -

Latest Posts

Don't Miss