Health Tips: ಡಾ.ಪ್ರಕಾಶ್ರಾವ್ ಅವರು ಸುರಕ್ಷಾ ಔಷಧ ಬಳಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಯಾವ ವೈದ್ಯರ ಬಳಿ ಹೋಗಿ ಔಷಧಿ ಕೇಳುತ್ತಿದ್ದೇವೆ. ಚಿಕಿತ್ಸೆ ಪಡೆಯುತ್ತಿದ್ದೇವೆ ಅನ್ನೋದು ನಮಗೆ ಸರಿಯಾಗಿ ತಿಳಿದಿರಬೇಕು. ಏಕೆಂದರೆ, ಇಂದಿನ ಕಾಲದಲ್ಲಿ ಅದೆಷ್ಟೋ ಜನ, ತಾವು ವೈದ್ಯರೆಂದು ಸುಳ್ಳು ಹೇಳಿ, ಚಿಕಿತ್ಸೆ ನೀಡುತ್ತಿದ್ದಾರೆ. ಅಂಥ ವೈದ್ಯರಿಂದ ದೂರವಿರಬೇಕು ಅಂತಾರೆ ಡಾ.ಪ್ರಕಾಶ್ ರಾವ್.
ಅಲ್ಲದೇ ಔಷಧಿ ಅಂಗಡಿಗೆ ಹೋದಾಗ, ಅಲ್ಲಿ ಔಷಧಿ ನೀಡುವವರು ಕೂಡ ಸರಿಯಾಗಿ ಔಷಧಿ ನೀಡಿದ್ದಾರಾ ಅಂತಾ ಚೆಕ್ ಮಾಡಬೇಕು. ಏಕೆಂದರೆ, ಕೆಲವರು ಈ ಔಷಧಿ ಬದಲು ಇದೇ ರೀತಿಯ ಬೇರೆ ಔಷಧಿ ಇದೆ ಎಂದು ಹೇಳುತ್ತಾರೆ. ಅಂಥ ಔಷಧಿಗಳನ್ನು ವೈದ್ಯರ ಬಳಿ ಕೇಳಿ ಬಳಸಬಹುದು.
ಈಗ ಗೂಗಲ್ ಕೂಡ ಸಹಾಯಕ್ಕೆ ಇದೆ. ಫೋನ್ ಇದೆ. ನೀವು ವೈದ್ಯರ ನಂಬರ್ ಪಡೆದು ಔಷಧಿಯ ವಿವರಣೆ ಕೇಳಿ ಬಳಸಬಹುದು. ಬೇರೆಯವರು ಈ ಮಾತ್ರೆ ಸೇವಿಸುತ್ತಿದ್ದಾರೆ. ಅವರಿಗೂ ಸೇಮ್ ಆರೋಗ್ಯ ಸಮಸ್ಯೆ ಅಂತೆ ಅಂತಾ ನೀವೂ ಆ ಔಷಧಿಯನ್ನೇ ಸೇವಿಸಿದರೆ, ಅದು ನಿಮ್ಮ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ ಅಂತಾ ಅರ್ಥವಲ್ಲ. ಹಾಗಾಗಿ ವೈದ್ಯರ ಬಳಿ ಹೋಗಿ, ಪರೀಕ್ಷಿಸಿ ಔಷಧಿ ಪಡೆದು ಬರಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

