Wednesday, November 26, 2025

Latest Posts

Health Tips: ಎದೆ ಹಾಲು ಕುಡಿಸಿದ 15 ನಿಮಿಷ ಮಕ್ಕಳನ್ನ ಮಲಗಿಸಬೇಡಿ? ಮಕ್ಕಳಿಗೆ ತೆಗಿಸೋದು ಮುಖ್ಯ?

- Advertisement -

Health Tips: ಚಿಕ್ಕ ಮಕ್ಕಳ ಆರೈಕೆ ಬಗ್ಗೆ ಎಷ್ಟೇ ಕಾಳಜಿ ಮಾಡಿದರೂ ಅದು ಕಮ್ಮಿ ಅಂತಾ ಹೇಳಲಾಗುತ್ತದೆ. ಏನೇ ಆರೈಕೆ ಮಾಡುವುದಿದ್ದರೂ, ಅದರ ಬಗ್ಗೆ ತಿಳಿದು, ಮಾಹಿತಿ ಪಡೆದು, ಸೂಕ್ಷ್ಮ ರೀತಿಯಿಂದ ಶಿಶುಗಳನ್ನು ಬೆಳೆಸಬೇಕಾಗುತ್ತದೆ. ಹಾಗಾಗಿ ವೈದ್ಯರಾಗಿರುವ ಡಾ.ಪ್ರಿಯಾ ಶಿವಳ್ಳಿ ಅವರು ಎದೆ ಹಾಲು ಕುಡಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಶಿಶುಗಳು ಜನಿಸಿ 2 ವಾರದ ಬಳಿಕ ಟಮ್ಮಿ ಟೈಮ್ ಶುರು ಮಾಡಬಹುದು ಅಂತಾರೆ ವೈದ್ಯರು. ಶಿಶುಗಳಿಗೆ ಹಾಲುಣಿಸಿ 15 ನಿಮಿಷದ ತನಕ ಮಲಗಿಸಬಾರದು. ಅವುಗಳಿಗೆ ತೇಗು ಬರಿಸಿ, ಬಳಿಕ ಮಲಗಿಸಬೇಕು. ಇದರಿಂದ ಮಕ್ಕಳ ಜೀರ್ಣಶಕ್ತಿ ಉತ್ತಮವಾಗಿರುತ್ತದೆ.

ನೀವು ಹಾಲುಣಿಸಿ ಮಲಗಿಸಿದರೆ, ಗ್ಯಾಸ್ ಪ್ರಾಬ್ಲಮ್ ಆಗುತ್ತದೆ. ಹಾಗಾಗಿ ಹಾಲುಣಿಸಿ, ತೇಗು ಬಂದ ಬಳಿಕವೇ ಮಗುವನ್ನು ಮಲಗಿಸಬೇಕು. ಇನ್ನು ಮಲಗಿಸುವಾಗಲು, ಬೆನ್ನಿನ ಮೇಲೆ ಮಲಗಿಸಬೇಕು. ಮಗುವಿನ ಉದರ ಹಾಸಿಗೆಗೆ ತಾಕುವಂತೆ ಮಲಗಿಸಬೇಡಿ. ಅಂದರೆ ಅಂಗಾತ ಮಲಗಿಸಬೇಡಿ. ಸರಿಯಾಗಿ ಮಲಗಿಸಬೇಕು ಅಂತಾರೆ ವೈದ್ಯರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss