Friday, August 29, 2025

Latest Posts

Health Tips: ಊಟದ ಬಳಿಕ ನೀವು ಮಾಡುವ ಈ ತಪ್ಪುಗಳೇ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ.

- Advertisement -

Health Tips: ಊಟ ಮಾಡುವ ಸಮಯಕ್ಕೆ ಸರಿಯಾಗಿ ಮಾಡಿದರೆ, ಆರೋಗ್ಯಕರ ಆಹಾರ ಸೇವಿಸಿದರೆ, ಹೆಚ್ಚು ಟೆನ್ಶನ್ ತೆಗೆದುಕ“ಳ್ಳದೇ, ನೆಮ್ಮದಿಯಾಗಿದ್ದರೆ, ಹಲವು ರೋಗಗಳು ನಮ್ಮಿಂದ ದೂರವಿರುತ್ತದೆ. ಆದರೆ ನೀವು ಊಟವಾದ ಬಳಿಕ ಮಾಡುವ ಕೆಲ ತಪ್ಪುಗಳು ನಿಮ್ಮ ಆರೋಗ್ಯವನ್ನು ನಿಮ್ಮಿಂದ ಕಸಿಯಬಹುದು. ಹಾಗಾದ್ರೆ ಆ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ.

  1. ಊಟವಾದ ತಕ್ಷಣ ಕಾಫಿ ಅಥವಾ ಟೀ ಕುಡಿಯುವುದು. ಇತ್ತೀಚಿನ ದಿನಗಳಲ್ಲಿ ನೀವು ಎಲ್ಲಾದರೂ ಕಾರ್ಯಕ್ರಮಕ್ಕೆ ಹೋದರೆ, ಅಲ್ಲಿ ಊಟವಾದ ತಕ್ಷಣ ನಿಮಗೆ ಕುಡಿಯಲು ಚಹಾ ಅಥವಾ ಕಾಫಿ ನೀಡಲಾಗುತ್ತದೆ. ಆದರೆ ಹೀಗೆ ಊಟದ ಬಳಿಕ ಚಹಾ, ಕಾಫಿ ಕುಡಿಯುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಪ್ರತಿದಿನ ಈ ಅಭ್ಯಾಸವಿದ್ದಲ್ಲಿ, ನಿಮ್ಮ ದೇಹದ ಶಕ್ತಿ ಕ್ರಮಣ ಹಾಳಾಗುತ್ತದೆ. ಮತ್ತು ನಿಮ್ಮ ದೇಹದಲ್ಲಿ ಕೆಟ್ಟ ಫ್ಯಾಟ್ ಹೆಚ್ಚಾಗುಚ್ಚದೆ.
  2. ಊಟವಾಗಿ ಅರ್ಧ ಗಂಟೆ ಬಳಿಕ ನೀರು ಕುಡಿಯಬೇಕು ಅಂತಾ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಆದರೆ ಕೆಲವರು ಊಟ ಮಾಡುವಾಗ ಮತ್ತು ಊಟವಾದ ತಕ್ಷಣ ಹೆಚ್ಚು ನೀರು ಕುಡಿಯುತ್ತಾರೆ. ಇದು ನಮ್ಮ ಜೀರ್ಣಕ್ರಿಯಾ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದರಿಂದ ಉದರ ಸಮಸ್ಯೆಗಳು ಹೆಚ್ಚಾಗುತ್ತದೆ.
  3. ಊಟವಾದ ತಕ್ಷಣ ನಿದ್ರೆ ಮಾಡುವುದು ಕೂಡ 1 ಕೆಟ್ಟ ಚಾಳಿ. ಹೀಗೆ ಮಾಡುವುದರಿಂದಲೂ ನಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಅಲ್ಲದೇ, ದೇಹದ ತೂಕ ಕೂಡ ಹೆಚ್ಚುತ್ತದೆ.
  4. ಊಟವಾದ ತಕ್ಷಣ ಹಣ್ಣಿನ ಸೇವನೆ ಮಾಡಬಾರದು. ನಾವು ತಿಂಡಿ ಮತ್ತು ಊಟದ ಮಧ್ಯದಲ್ಲಿ ಸಿಗುವ ಸಮಯದಲ್ಲೇ ಹಣ್ಣಿನ ಸೇವನೆ ಮಾಡಬೇಕು. ಅದರಲ್ಲೂ ಸೂರ್ಯನಿರುವ ವೇಳೆ ಅಂದ್ರೆ ಬೆಳಿಗ್ಗೆ, ಮಧ್ಯಾಹ್ನ ಮಾತ್ರ ಹಣ್ಣಿನ ಸೇವನೆ ಮಾಡಬೇಕು. ಸೂರ್ಯಾಸ್ತದ ಬಳಿಕ ಹಣ್ಣಿನ ಸೇವನೆ ಉತ್ತಮವಲ್ಲ ಅಂತಾ ಹೇಳಲಾಗುತ್ತದೆ. ಅದರಲ್ಲೂ ನೀವು ಊಟದ ಬಳಿಕ ಹಣ್ಣಿನ ಸೇವನೆ ಮಾಡಿದರೆ, ಗ್ಯಾಸ್ ಉತ್ಪತ್ತಿಯಾಗುತ್ತದೆ. ಅಜೀರ್ಣವಾಗುತ್ತದೆ.
  5. ಊಟ ಮಾಡಿದ ತಕ್ಷಣ ಬ್ರಶ್ ಮಾಡಬಾರದು. ಊಟವಾದ ಬಳಿಕ, ರಾತ್ರಿ ಮಲಗುವ ವೇಳೆ ಬ್ರಶ್ ಮಾಡುವುದು ಉತ್ತಮ ವಿಷಯ. ಆದರೆ ಊಟವಾಗಿ ಅರ್ಧಗಂಟೆ ಕಾದರೆ ಉತ್ತಮ. ಇಲ್ಲವಾದರೆ, ಊಟವಾದ ತಕ್ಷಣ ನಮ್ಮ ಎನಾಮಲ್ ಸಾಫ್ಟ್ ಆಗಿರುತ್ತದೆ. ತಕ್ಷಣ ಬ್ರಶ್ ಮಾಡಿದರೆ ಹಲ್ಲು ಕ್ರಮೇಣ ಕಳಪೆಯಾಗುತ್ತದೆ.
- Advertisement -

Latest Posts

Don't Miss