Friday, November 28, 2025

Latest Posts

Health Tips: ಪ್ರತಿದಿನ ಸಿಹಿ ತಿಂಡಿ ತಿನ್ನುವವರು ಇದನ್ನು ಓದಲೇಬೇಕು

- Advertisement -

Health Tips: ಸಿಹಿ ತಿಂಡಿ ತಿನ್ನೋದು ಅಂದ್ರೆ, ಅದು ಡ್ರಗ್ಸ್ ಸೇವನೆಗಿಂತಲೂ ಅಪಾಯಕಾರಿ ಅನ್ನೋದು ನೆನಪಿರಬೇಕು. ಅದರಲ್ಲೂ ನೀವು ಸಕ್ಕರೆ ಬಳಸಿ ಮಾಡಿರುವ ಸಿಹಿ ತಿಂಡಿ ಪ್ರತಿದಿನ ತಿಂದರೆ, ನಿಮ್ಮ ಆರೋಗ್ಯ ಹಾಳಾಗುವುದಲ್ಲದೇ, ನಿಮ್ಮ ಮುಖದ ಮೇಲೆ ನೆರಿಗೆ ಕಾಣಿಸಿಕ“ಳ್ಳಲು ಶುರುವಾಗುತ್ತದೆ.

ಪ್ರತಿದಿನ ಸಕ್ಕರೆಯಿಂದ ಮಾಡಿದ ಸಿಹಿ ಪದಾರ್ಥ ತಿನ್ನುವುದರಿಂದ ನೀವು ಬಹುಬೇಗ ವಯಸ್ಸಾದವರ ರೀತಿ ಕಾಣುತ್ತೀರಿ. ಕಿಡ್ನಿ, ಹೃದಯ ಸಂಬಂಧಿ ಖಾಯಿಲೆಗಳು, ಶುಗರ್ ಸಮಸ್ಯೆ ಹೆಚ್ಚಾಗಲು ಕೂಡ ಸಕ್ಕರೆ ಸೇವನೆಯೇ ಕಾರಣವಾಗಿದೆ.

ಇನ್ನು ನಿಮ್ಮ ಮಕ್ಕಳಿಗೆ ಮಾತ್ರ ಇಂಥ ತಿಂಡಿಗಳನ್ನು ನೀಡಲೇಬೇಡಿ. ಮಕ್ಕಳು ಚಿಕ್ಕವರಿದ್ದಾಗಲೇ ಸಿಹಿ ತಿಂಡಿ ದಾಸರಾದರೆ, ಭವಿಷ್ಯದಲ್ಲಿ ಅವರ ಆರೋಗ್ಯ ಬಹುಬೇಗ ಹಾಳಾಗುತ್ತದೆ.

ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚು ಸಕ್ಕರೆ ಸೇವನೆ ಮಾಡಿದರೆ, ಬಹುಬೇಗ ಅವರು ಮೆಚ್ಯೂರ್ ಆಗಬಹುದು. ಇದು ಅನಾರೋಗ್ಯಕರ ಜೀವನದ ಲಕ್ಷಣವಾಗಿದೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಸಕ್ಕರೆ, ಚಾಕೋಲೇಟ್ಸ್ ಸೇವನೆಯ ಅಭ್ಯಾಸ ಮಾಡಬೇಡಿ.

ಸಿಹಿ ತಿನ್ನಲೇಬೇಕು ಅಂತಿದ್ದರೆ, ಸ್ವೀಟ್ ಜಾಗದಲ್ಲಿ ಖರ್ಜೂರ ತಿನ್ನಿ. ಚಾಕೋಲೇಟ್ಸ್ ಜಾಗದಲ್ಲಿ ಅಂಜೂರ ತಿನ್ನಿ, ದ್ರಾಕ್ಷಿ ಸೇವನೆ ಮಾಡಿ.

- Advertisement -

Latest Posts

Don't Miss