Health Tips: ಇಂದಿನ ಕಾಲದಲ್ಲಿ ಹಲವರಿಗೆ ಬಿಪಿ, ಶುಗರ್ ಇರೋದು ಕಾಮನ್ ಆಗಿದೆ. ಚಿಕ್ಕ ಚಿಕ್ಕ ಮಕ್ಕಳಿರುವಾಗಲೇ, ಆರೋಗ್ಯ ಸಮಸ್ಯೆ ಉದ್ಭವಿಸುತ್ತಿದೆ. ಆದರೆ ನಾವು ನಮ್ಮ ಆಹಾರ ಸೇವನೆಯಿಂದಲೇ ಈ ಸಮಸ್ಯೆಗಳನ್ನು ಸರಿಪಡಿಸಬಹುದು. ಹಾಗಾದ್ರೆ ಶುಗರ್ ಲೆವಲ್ ನಿಭಾಯಿಸಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಶುಗರ್ ಲೆವಲ್ ನಿಭಾಯಿಸಬೇಕು ಅಂದ್ರೆ ಇರುವ ಸಿಂಪಲ್ ರೆಸಿಪಿ ಅಂದ್ರೆ ಮೆಂತ್ಯೆ ನೀರು. ನೀವು ರಾತ್ರಿ 1 ಗ್ಲಾಸ್ ನೀರಿಗೆ 1 ಸ್ಪೂನ್ ಮೆಂತ್ಯೆ ಹಾಕಿ, ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಆ ನೀರನ್ನು ಕುಡಿಯಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಕೆಲ ದಿನಗಳಲ್ಲಿ ನಿಮಗೆ ಫಲಿತಾಂಶ ತಿಳಿಯುತ್ತದೆ.
ಹಾಗಲಕಾಯಿ ಜ್ಯೂಸ್: ಹೆಸರು ಕೇಳುತ್ತಿದ್ದ ಹಾಗೆ ನಿಮಗೆ ವಾಕರಿಕೆ ಬರಬಹುದೇನೋ. ಆದರೆ ಶುಗರ್ ಕಂಟ್ರೋಲ್ ಮಾಡುವುದರಲ್ಲಿ ಪ್ರಮುಖ ಆದ್ಯತೆ ಇರುವ ಮದ್ದ ಅಂದ್ರೆ ಇದೆ. ಬೆಳಿಗ್ಗೆ ಖಾಲಿ ಹ“ಟ್ಟೆಯಲ್ಲಿ ನೀವು ಹಾಗಲಕಾಯಿ ಜ್ಯೂಸ್ ಕುಡಿದರೆ, ಶುಗರ್ ಲೆವಲ್ ಕಂಟ್ರೋಲಿನಲ್ಲಿರುತ್ತದೆ.
ಬಾರ್ಲಿ ಹುಡಿ: ಚಪಾತಿ ಮಾಡುವಾಗ ನೀವು ಗೋಧಿ ಹುಡಿಗೆ, ಬಾರ್ಲಿ ಹುಡಿಯನ್ನು ಸೇರಿಸಿ, ಚಪಾತಿ ಮಾಡಿ ತಿನ್ನಿ. ಅಧವಾ ಬಾರ್ಲಿ ಬೇಯಿಸಿ, ಅದರ ನೀರನ್ನು ಕುಡಿಯಿರಿ. ಇದರಿಂದಲೂ ಶುಗರ್ ನಿಭಾಯಿಸಬಹುದು.

