Health Tips: ಇಂದಿನ ಕಾಲದಲ್ಲಿ ಹಲವು ಯುವಕ, ಯುವತಿಯರಿಗೆ ಇರುವ ಸಮಸ್ಯೆ ಅಂದ್ರೆ ಅದು ಹೊಟ್ಟೆಯ ಬೇಡದ ತೂಕ ಇಳಿಸೋದು. ಆರೋಗ್ಯಕರವಾದ ದೇಹ ಇರಬೇಕು ಅಂತಾ ಆಸೆ ಇದ್ರೂ, ಆಸೆಗೆ ಅಡ್ಡ ಬರೋದು, ಹೊಟ್ಟೆಯ ಬೇಡದ ತೂಕ. ಇದರಿಂದಲೇ ಹಲವರು ಮುಜುಗರಕ್ಕೆ ಈಡಾಗುತ್ತಾರೆ. ಆದರೆ ನಾವಿಂದು ನಿಮಗೆ ಈ ಸಮಸ್ಯೆಗೆ ಪರಿಹಾರ ಹೇಳಲಿದ್ದೇವೆ.
ಹೊಟ್ಟೆಯ ಬೇಡದ ತೂಕ ಕರಗಿಸಬೇಕು ಅಂದ್ರೆ ನೀವು ವಾಕಿಂಗ್, ಯೋಗ, ವ್ಯಾಯಾಮ ಇವುಗಳನ್ನಂತೂ ಮಾಡಲೇಬೇಕು. ಜತೆಗೆ ಊಟದಲ್ಲಿ ಆರೋಗ್ಯಕರ ಆಹಾರಗಳನ್ನೇ ಸೇವಿಸಬೇಕು. ಎಣ್ಣೆ ತಿಂಡಿ, ಜಂಕ್ ಫುಡ್, ಬೇಕರಿ ತಿಂಡಿ ಸೇರಿ ಅನಾರೋಗ್ಯಕರ ತಿಂಡಿಯ ಪ್ರಮಾಣ ಮಿತಿಯಾಗಿಸಬೇಕು.
ಇದೆಲ್ಲ ಮಾಡಿದ್ದಲ್ಲಿ ನಿಮ್ಮ ತೂಕ ಅರ್ಧ ಇಳಿದ ಹಾಗೆ. ಆದರೆ ಈ ತೂಕವನ್ನು ನೀವು ಫಾಸ್ಟ್ ಆಗಿ ಇಳಿಸಬೇಕು ಅಂದ್ರೆ, ಇದರ ಜತೆ ನೀವು ಕೆಲವು ಪೇಯ ಸೇವಿಸಬೇಕು. 1 ಸ್ಪೂನ್ ಸೋಂಪು, ಜೀರಿಗೆ ಮತ್ತು ಧನಿಯಾ ಬೀಜವನ್ನು ತರಿ ತರಿಯಾಗಿ ಕುಟ್ಟಿ ಪುಡಿ ಮಾಡಿ.
1 ಪಾತ್ರೆಯಲ್ಲಿ ನೀರು ಕುದಿಸಿ, ಆ ಕುದಿಯುವ ನೀರಿಗೆ ಇದನ್ನು ಸೇರಿಸಿ, ಮತ್ತೆ ಕುದಿಸಿದರೆ ಕಶಾಯ ರೆಡಿ. ಇದನ್ನು ಸೋಸಿ, ಬಿಸಿ ಬಿಸಿಯಾಗಿಯೇ ಸೇವಿಸಿ. ಅತ್ಯುತ್ತಮ ರಿಸಲ್ಟ್‌ಗಾಗಿ ನೀವು ಇದನ್ನು ಬೆಳಿಗ್ಗೆ ತಿಂಡಿ ತಿನ್ನುವುದಕ್ಕೂ ಮುಂಚೆ ಸೇವಿಸಬೇಕು.
ಇದರ ಸೇವನೆಯಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ನಿಮ್ಮ ದೇಹದಲ್ಲಿರುವ ಕೆಟ್ಟ ಕ“ಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮಲಬದ್ಧತೆ ಸಮಸ್ಯೆ ಸರಿಯಾಗುತ್ತದೆ. ಇದೆಲ್ಲ ಆದಾಗ, ತೂಕ ಕೂಡ ಇಳಿಯುತ್ತದೆ.




