Health Tips: ಸಕ್ಕರೆ ಕಾಯಿಲೆಯಿಂದಾಗೋ ಸಮಸ್ಯೆಗಳೇನು? | ಲೈಂಗಿಕ ಕ್ರಿಯೆಗಳಿಗೆ ತೊಂದರೆ?

Health Tips: ಇಂದಿನ ಕಾಲದಲ್ಲಿ ಶುಗರ್ ಕಾಮನ್ ಖಾಯಿಲೆಯಾಗಿದ್ದರೂ ಸಹ. ಅದರ ಪರಿಣಾಮ ಮಾತ್ರ ಮಾರಕವಾಗಿರುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ ಇದ್ದರೆ ಅದನ್ನು ನಿರ್ಲಕ್ಷಿಸದೇ, ಸರಿಯಾದ ಚಿಕಿತ್ಸೆ ಆಹಾರ ಪದ್ಧತಿಯನ್ನು ಅನುಸರಿಸುವುದು ತುಂಬಾ ಮುಖ್ಯ ಅಂತಾರೆ ವೈದ್ಯರು.

ವೈದ್ಯರಾದ ಡಾ.ಪ್ರಕಾಶ್ ರಾವ್ ಈ ಬಗ್ಗೆ ವಿವರಿಸಿದ್ದು, ಸಕ್ಕರೆ ಖಾಯಿಲೆ ನಿರ್ಲಕ್ಷಿಸಿದರೆ, ಲೈಂಗಿಕ ಸಮಸ್ಯೆ, ಮೆದುಳಿನ ಸಮಸ್ಯೆ ಸೇರಿ ಹಲವು ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆಗೆ ಸರಿಯಾದ ಚಿಕಿತ್ಸೆ ಮಾಡದಿದ್ದರೆ, ಮನೋರೋಗ ಬರುವ ಸಾಧ್ಯತೆ ಇದೆ ಅಂತಾರೆ ವೈದ್ಯರು.

ನಿಮಗೆ ಸಕ್ಕರೆ ಖಾಯಿಲೆ ಇದೆ ಅಂತಾ ತಿಳಿದ ಬಳಿಕ ನೀವು ಪದೇ ಪದೇ ಸಕ್ಕರೆ ಪ್ರಮಾಣವನ್ನು ಪರೀಕ್ಷೆ ಮಾಡುತ್ತ ನೋಡುತ್ತಲೇ ಇರಬೇಕು. ಯಾಕಂದ್ರೆ ಸಕ್ಕರೆ ಪ್ರಮಾಣದಲ್ಲಿ ಏರುಪೇರು ಆಗುತ್ತಲೇ ಇರುತ್ತದೆ. ಹಾಗಾಗಿ ಸಕ್ಕರೆ ಪ್ರಮಾಣವನ್ನು ಪದೇ ಪದೇ ಪರೀಕ್ಷಿಸಬೇಕು.

ಇನ್ನು ಸಕ್ಕರೆ ಖಾಯಿಲೆ ನಿರ್ಲಕ್ಷಿಸಿದರೆ, ಹೃದಯ ಸ್ತಂಭನ, ಕಿಡ್ನಿ ಫೇಲ್, ಬ್ರೇನ್ ಸ್ಟ್ರೋಕ್ ಸೇರಿ ಹಲವು ಜೀವಕ್ಕೆ ಹಾನಿಯಾಗುವಂಥ ಖಾಯಿಲೆಯೂ ಬರಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಸಕ್ಕರೆ ಖಾಯಿಲೆಯನ್ನು ಎಂದಿಗೂ ನಿರ್ಲಕ್ಷಿಸಬೇಡಿ.

About The Author