Health Tips: ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವವಾಗುತ್ತಿದ್ದರೆ, ಅದಕ್ಕೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು. ಕಾರಣ ತಿಳಿದು, ಮದ್ದು ತೆಗೆದುಕೊಳ್ಳಬೇಕು. ಮೂಗು, ಕಿವಿ, ಬಾಯಿ, ಗುದದ್ವಾರ, ಮೂತ್ರದಲ್ಲಿ ರಕ್ತ. ಹೀಗೆ ರಕ್ತಸ್ರಾವ ಹೇಗೆ ಬೇಕಾದರೂ ಆಗಬಹುದು. ಹಾಗಾದ್ರೆ ರಕ್ತಸ್ರಾವವಾಗಲು ಕಾರಣವೇನು..? ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ನಮ್ಮ ದೇಹದಲ್ಲಿರುವ ರಕ್ತದ ಪ್ರಮಾಣ ಹೆಚ್ಚಾಗಿ, ಒತ್ತಡ ತಾಳಲಾರದೇ, ದೇಹದ ಯಾವುದಾದರೂ ಒಂದು ಅಂಗದ ಮೂಲಕ ರಕ್ತ ಹೊರಗೆ ಬರುವುದನ್ನು ರಕ್ತಸ್ರಾವ ಎಂದು ಕರೆಯಲಾಗುತ್ತದೆ. ಹಾಗಂತ ನಾವು ರಕ್ತವನ್ನು ಹೋಗಲು ಬಿಡಬಾರದು. ಯಾಕಂದ್ರೆ ಈ ರೀತಿಯಾಗಿ ರಕ್ತ ಹೊರಗಡೆ ಹೋಗಿ, ನಮ್ಮ ದೇಹದಲ್ಲಿ ನಿಶ್ಶಕ್ತಿ ಉಂಟಾಗುತ್ತದೆ. ಅಲ್ಲದೇ ಕೆಲವೊಮ್ಮೆ ಕ್ಯಾನ್ಸರ್ ಇದ್ದಾಗಲೂ ಈ ರೀತಿ ರಕ್ತ ಹೊರಬರುತ್ತದೆ. ಹಾಗಾಗಿ ಒಮ್ಮೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
ಇನ್ನು ಈ ರೀತಿ ರಕ್ತಸ್ರಾವವಾಗಬಾರದು ಅಂದ್ರೆ, ನಾವು ತಂಪಾದ ಆಹಾರವನ್ನೇ ಸೇವಿಸಬೇಕು. ಮಜ್ಜಿಗೆ ಮೊಸರು, ಕುಚ್ಚಲಕ್ಕಿ ಅನ್ನ, ಎಳನೀರು, ಹಣ್ಣು, ಹಸಿ ತರಕಾರಿ, ಇಂಥ ಆಹಾರ ಸೇವನೆ ಮಾಡಬೇಕು. ಹೆಚ್ಚು ಮಸಾಲೆ ಪದಾರ್ಥ, ಖಾರ ಪದಾರ್ಥಗಳನ್ನು ತಿನ್ನಬಾರದು. ಹೆಚ್ಚು ನೀರು ಕುಡಿಯಬೇಕು. ಆಗಲೇ, ನಮ್ಮ ದೇಹ ತಂಪಾಗಿರುತ್ತದೆ.
ಇನ್ನು ಹೆಚ್ಚು ಉಪವಾಸ ಮಾಡಬಾರದು. ಹೊತ್ತಿಗೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ಸರಿಯಾಗಿ ನಿದ್ದೆ ಮಾಡಬೇಕು. 7ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡದಿದ್ದಲ್ಲಿ, ನಿಮ್ಮ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇನ್ನು ನಿಮಗೆ ಮಲಬದ್ಧತೆ ಸಮಸ್ಯೆ ಇದ್ದಲ್ಲಿ, ಆ ವೇಳೆಯೂ ನೀವು ಉತ್ತಮ ಆಹಾರ ಸೇವನೆ ಮೂಲಕ ಅದನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ, ಮಲ, ಮೂತ್ರದಲ್ಲಿಯೂ ರಕ್ತ ಹೋಗಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.