Health Tips: BACK PAIN ಕಾರಣ ಏನು? PAIN KILLER ಪರಿಹಾರ ಅಲ್ಲ: Dr Vidhya Bandaru Podcast

Health Tips: ಇಂದಿನ ಯುವ ಪೀಳಿಗೆಯಲ್ಲಿ ಬೆನ್ನು ನೋವು, ಭುಜದ ನೋವು ಸೇರಿ ಹಲವು ಸಮಸ್ಯೆಗಳು ಕಾಣಿಸುತ್ತಿದೆ. ಕಾರಣ ಅವರು ಕುಳಿತುಕ“ಳ್ಳುವ ರೀತಿ, ಜೀವನ ಶೈಲಿ ಎಲ್ಲವೂ ಇದಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ವೈದ್ಯರೇ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ವೈದ್ಯರು ಹೇಳುವ ಪ್ರಕಾರ ಇಂದಿನ ಯುವ ಪೀಳಿಗೆಗೆ ಬೆನ್ನು ನೋವು, ಭುಜದ ನೋವು ಬರಲು ಕಾರಣವೇನು ಎಂದರೆ, ಕುಳಿತುಕ“ಳ್ಳುವ ರೀತಿ. ವರ್ಕ್ ಫ್ರಮ್ ಹೋಮ್ ಇದ್ದಾಗ, ಅಥವಾ ಸುಮಾರು ವೇಳೆ ಕಂಪ್ಯೂಟರ್ ಮುಂದೆ ಕುಳಿತಾಗ ಈ ರೀತಿ ನೋವು ಆಗುತ್ತದೆ.

ಅಲ್ಲದೇ ಕೂರುವ ರೀತಿ ತಪ್ಪಾದಾಗ ಮುಂದೆ ಡಿಸ್ಕ್ ಸಮಸ್ಯೆ ಉದ್ಭವಿಸುತ್ತದೆ. ಕೆಲಸಕ್ಕೆ ಕುಳಿತಾಗ ಅಥವಾ ವಾಹನ ಓಡಿಸುವಾಗ ಸರಿಯಾಗಿ ಕೂರದಿದ್ದಲ್ಲಿ, ಡಿಸ್ಕ್ ಸಮಸ್ಯೆ ಬಂದೇ ಬರುತ್ತದೆ ಅಂತಾರೆ ವೈದ್ಯರು.

ಇನ್ನು ಹಲವು ಕಡೆ ಯುವ ಪೀಳಿಗೆಯವರು ಕೂತಲ್ಲೇ, ಸಮಯವಲ್ಲದ ಸಮಯದಲ್ಲಿ ಪಿಜ್ಜಾ, ಬರ್ಗರ್ ಆರ್ಡರ್ ಮಾಡಿ ತಿನ್ನುತ್ತಾರೆ. ಇಂಥ ಚಟಗಳೇ ನಮ್ಮ ಆರೋಗ್ಯ ಹಾಳಾಗಕ್ಕೆ ಕಾರಣ ಅಂತಾರೆ ವೈದ್ಯರು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author