Health Tips: ನೀವು ತುಂಬಾ ಸಮಯ 1 ಕಡೆ ಕುಳಿತರೆ, ಅಥವಾ ಹೆಚ್ಚು ನಡೆದರೆ ಕಾಲು ಊತ ಕಂಡುಬರುತ್ತದೆ. ಹಾಗಾದ್ರೆ ಇದಕ್ಕೆ ಕಾರಣವೇನು..? ಇದು ಕಾಮನ್ ಆಗಿರುವ ಸಮಸ್ಯೆನಾ ಅಥವಾ ಇದರ ಬಗ್ಗೆ ನಾವು ಗಮನ ಹರಿಸಬೇಕಾ..? ಈ ಎಲ್ಲಾ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ.
ವೈದ್ಯರಾದ ಡಾ.ಪವನ್ ಕುಮಾರ್ ಹೇಳುವ ಪ್ರಕಾರ, ನಮಗೆ ಹೃದಯದ ಸಮಸ್ಯೆ, ಬಿಪಿ, ಶುಗರ್ ಸಮಸ್ಯೆ ಇದ್ದಲ್ಲಿ, ಕಾಲು ಊತ ಕಂಡು ಬರುತ್ತದೆ. ಹೃದಯ ಸಂಬಂಧಿ ಕಾಯಿಲೆ ಬಂಂದಾಗ, ನಮ್ಮ ದೇಹದಲ್ಲಿ ಹಲವು ಬದಲಾವಣೆ ಕಾಣಿಸಿಕ“ಳ್ಳುತ್ತದೆ.
ಉಸಿರಾಟದ ಸಮಸ್ಯೆ ಕಾಾಣಿಸಿಕ“ಳ್ಳುತ್ತದೆ. ಉಬ್ಬಸದ ಸಮಸ್ಯೆ ಕೂಡ ಎದುರಾಗಬಹುದು. ಅಥವಾ ಕಾಲಿನಲ್ಲಿ ಊತ ಕಾಣಿಸಿಕ“ಳ್ಳುತ್ತದೆ. ನಾವು ಆರೋಗ್ಯವಾಗಿದ್ದರೆ. ನಮ್ಮ ಕಾಲಿನಲ್ಲಿ ಯಾವುದೇ ಊತ ಕಾಣಿಸುವುದಿಲ್ಲ. ಅದೇ ನಮಗೆ ಹೃದಯದ ಸಮಸ್ಯೆ ಇದ್ದರೆ ಮಾತ್ರ, ಕಾಲು ಊತ ಕಂಡುಬರುತ್ತದೆ ಅಂತಾರೆ ವೈದ್ಯರು.
ಅಲ್ಲದೇ ಎದೆ ಉರಿ, ಲೂಸ್ ಮೋಷನ್, ವಾಂತಿ, ಕುತ್ತಿಗೆ ನೋವು, ವಾಂತಿ, ಎದೆ ನೋವು, ಭುಜದ ನೋವು, ಬೆರಳುಗಳಲ್ಲಿ ಜೋಮು ಬರುವಂಥದ್ದೆಲ್ಲ ಹೃದಯ ಸಮಸ್ಯೆ ಇದ್ದಾಗ ಕಂಡುಬರುವ ಲಕ್ಷಣಗಳು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




