Health Tips: ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಡಾ.ತನುಜಾ ಪ್ರದೀಪ್ ಅವರು ಸಣ್ಣ ಮಕ್ಕಳಿಗೆ ಏಕೆ ಕನ್ನಡಕ ಬರುತ್ತದೆ, ಕಣ್ಣಿನ ಸಮಸ್ಯೆಗಳಾಗುತ್ತದೆ ಎಂದು ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಮಕ್ಕಳು ಆಡಲು ಆಚೆ ಹೋಗಬೇಕು. ಅಗತ್ಯಕ್ಕಿಂತ ಹೆಚ್ಚು ಸ್ಕ್ರೀನ್ ಟೈಮ್ ನೀಡಿದ್ದಲ್ಲಿ, ಮಕ್ಕಳ ಕಣ್ಣಿನ ಆರೋಗ್ಯ ಹಾಳಾಗಿ ಹೋಗುತ್ತದೆ. ಇದರಿಂದಲೇ ಚಿಕ್ಕಂದಿನಲ್ಲೇ ಅವರಿಗೆ ಕನ್ನಡಕ ಬರುವುದು. ಅಲ್ಲದೇ, ಅನುವಂಶಿಕವಾಗಿಯೂ ಕಣ್ಣಿನ ಸಮಸ್ಯೆ ಬರುತ್ತದೆ ಅಂತಾರೆ ವೈದ್ಯರು.
ಸೂರ್ಯನ ತಿಳಿ ಬಿಸಿಲಿನಲ್ಲಿ ಮಕ್ಕಳು ಆಡಬೇಕು. ಇದರಿಂದ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ. ಇದು ಕಣ್ಣಿನ ಆರೋಗ್ಯಕ್ಕೂ ಉತ್ತಮ. ಹಾಗಾಗಿ ಮಕ್ಕಳು ಸ್ವಲ್ಪ ಸಮಯವಾದ್ರೂ ಸೂರ್ಯನ ತಿಳಿ ಬಿಸಿಲನಲ್ಲಿ ಆಡಬೇಕು.
ಇನ್ನು 5 ವರ್ಷಕ್ಕಿಂತ ಹೆಚ್ಚು ಶುಗರ್ ಇದ್ದಲ್ಲಿ ಕಣ್ಣಿನ ಆರೋಗ್ಯ ಹಾಳಾಗೋದು ಖಚಿತ. ಹಾಗಾಗಿ ಶುಗರ್ ಕಂಟ್ರೋಲ್ ಮಾಡುವುದು ಮುಖ್ಯ ಅಂತಾರೆ ವೈದ್ಯರು.
ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ. ನಿಮಗೂ ಕಣ್ಣಿನ ಸಮಸ್ಯೆ ಇದ್ದು, ಉತ್ತಮ ಚಿಕಿತ್ಸೆ ಬೇಕಿದ್ದಲ್ಲಿ, 080 62153400 ಈ ನಂಬರ್‌ಗೆ ಕರೆ ಮಾಡಿ, ಮಾಹಿತಿ ಪಡೆಯಿರಿ.




