Health tips: ಬಿಸಿಲಿನ ತಾಪ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದಿರುವುದು, ಆರೋಗ್ಯಕರ ಆಹಾರ ಸೇವನೆ ಮಾಡದಿರುವುದು, ಹೆಚ್ಚು ಟೆನ್ಶನ್ ತೆಗೆದುಕ“ಳ್ಳುವುದು, ಇತ್ಯಾದಿ ಲೋ ಬಿಪಿ ಲಕ್ಷಣ. ಹಾಗಾದ್ರೆ ಸಡನ್ ಆಗಿ ಲೋ ಬಿಪಿ ಬಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಲೋ ಬಿಪಿಯಾದಾಗ, ನಮ್ಮ ದೇಹದ ಬಣ್ಣ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ದೇಹ ಬೆವರಲು ಶುರುವಾಗುತ್ತದೆ. ತಲೆ ತಿರುಗುತ್ತದೆ. ವಾಂತಿ ಬರುತ್ತದೆ. ಉಸಿರಾಡಲು ಸಮಸ್ಯೆಯಾಗುತ್ತದೆ. ಏನು ಕೆಲಸ ಮಾಡದಿದ್ದರೂ, ನಾಲ್ಕು ಹೆಜ್ಜೆ ನಡೆದರೂ ತುಂಬಾ ಸುಸ್ತಾಗುತ್ತದೆ. ನಿಮಗೂ ಹೀಗಾಗುತ್ತದೆ ಎಂದಲ್ಲಿ ಅದು ಲೋ ಬಿಪಿ ಲಕ್ಷಣ ಎಂದು ತಿಳಿದುಬಿಡಿ.
ಹೀಗಾದಾಗ ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೇ, ನೀವು 1 ಗ್ಲಾಸ್ ನೀರಿಗೆ, ಅರ್ಧ ಸ್ಪೂನ್ ಉಪ್ಪು, 1 ಸ್ಪೂನ್ ಸಕ್ಕರೆ ಹಾಕಿ ಕುಡಿಯಿರಿ. ಇದರಿಂದ ನಿಮ್ಮ ಬಿಪಿ ಸ್ವಲ್ಪ ಕಂಟ್ರೋಲಿಗೆ ಬರುತ್ತದೆ.
ಎರಡನೇಯದಾಗಿ ನೀವು ಸೋಫಾ ಮೇಲೆ ಕಾಲು ಮೇಲೆ ಮಾಡಿ ಮಲಗಬೇಕು. ಇದರಿಂದ ದೇಹದ ರಕ್ತಸಂಚಲನ ಉಲ್ಟಾ ಆಗುತ್ತದೆ. ಆಗ ಬಿಪಿ ಸರಿಯಾಗುತ್ತದೆ.
ಮೂರನೇಯದಾಗಿ 1 ಕಪ್ ಸ್ಟ್ರಾಂಗ್ ಟೀ ಅಥವಾ ಸ್ಟ್ರಾಂಗ್ ಕಾಫಿ ಮಾಡಿ ಕುಡಿಯಿರಿ. ಅದಕ್ಕೆ ಹಾಲು ಸಕ್ಕರೆ ಹಾಕಕೂಡದು. ಇದೆಲ್ಲ ಮಾಡುವುದರಿಂದ ತಕ್ಷಣಕ್ಕೆ ನಿಮ್ಮ ಬಿಪಿ ಸರಿಯಾಗಬಹುದು. ಆದರೆ ಲೋ ಬಿಪಿ ಇದ್ದಲ್ಲಿ ನೀವು ವೈದ್ಯರ ಬಳಿ ಹೋಗಿ ಪರೀಕ್ಷಿಸಿಕ“ಳ್ಳಿ. ಹಿಮೋಗ್ಲೋಬಿನ್ ಪ್ರಮಾಣದಲ್ಲಿ ಕುಸಿತ ಕಂಡಾಗಲೇ ಲೋ ಬಿಪಿ ಕಾಣಿಸಿಕ“ಳ್ಳುತ್ತದೆ.