Health Tips: ಈಗಾಗಲೇ ವೈದ್ಯರು ನಮ್ಮ ದೇಹದಲ್ಲಿ ವಿಟಾಮಿನ್ ಎ ಅವಶ್ಯಕತೆ ಎಷ್ಟಿದೆ..? ಏಕೆ ಇದೆ..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದೀಗ ವೈದ್ಯರು ದೇಹದಲ್ಲಿ ವಿಟಾಮಿನ್ ಸಿ ಅವಶ್ಯಕತೆ ಏಕೆ ಇದೆ..? ಇದರಿಂದಾಗುವ ಲಾಭವೇನು.? ವಿಟಾಮಿನ್ ಸಿ ನಮ್ಮ ದೇಹಕ್ಕೆ ಸಿಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು ಎಂದು ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ನಮ್ಮ ದೇಹದಲ್ಲಿ ವಿಟಾಮಿನ್ ಸಿ ಕೊರತೆಯುಂಟಾದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ಮತ್ತು ಯಾಾವಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆಯೋ, ಆಗ ನಮಗೆ ಜ್ವರ, ನೆಗಡಿ ಕೆಮ್ಮು ಸೇರಿ, ಅನೇಯ ಅಪಾಯಕರ ಖಾಯಿಲೆ ಶುರುವಾಗುತ್ತದೆ.ಅಂಟು ರೋಗಗಳು ಬೇಗ ನಮ್ಮ ದೇಹಕ್ಕೆ ತಾಕುತ್ತದೆ. ಹಾಗಾಗಿ ನಮ್ಮ ದೇಹದಲ್ಲಿ ಆದಷ್ಟು ರೋಗ ನಿರೋಧಕ ಶಕ್ತಿ ಇರಬೇಕು. ಹಾಗೆ ರೋಗ ನಿರೋಧಕ ಶಕ್ತಿ ಇರಬೇಕು ಅಂದ್ರೆ, ನಮ್ಮ ದೇಹದಲ್ಲಿ ವಿಟಾಮಿನ್ ಸಿ ಅಂಶ ಇರಲೇಬೇಕು.
ಅಲ್ಲದೇ, ವಿಟಾಮಿನ್ ಸಿ ಅಂಶ ಕಡಿಮೆ ಇದ್ದರೆ, ಚರ್ಮದ ಸಮಸ್ಯೆ ಉಂಟಾಗುತ್ತದೆ. ಚರ್ಮ ಬೇಗ ಸುಕ್ಕುಗಟ್ಟುತ್ತದೆ. ಚರ್ಮದ ಅಲರ್ಜಿ ಬರುತ್ತದೆ. ಕೂದಲು ಉದುರುವ ಸಮಸ್ಯೆ, ಕೂದಲು, ತಲೆ ಬುಡ ಒಣಗುತ್ತದೆ. ಇದರಿಂದ ನಮ್ಮ ಸೌಂದರ್ಯವೇ ಹಾಳಾಗುತ್ತದೆ. ಹಾಗಾಗಿ ಸೌಂದರ್ಯ ಉಳಿಸಿಕೊಳ್ಳಲು ಕೂಡ, ನಮಗೆ ವಿಟಾಮಿನ್ ಸಿ ಅವಶ್ಯಕತೆ ಇದ್ದೇ ಇರುತ್ತದೆ.
ಜೊತೆಗೆ ನಿಮ್ಮ ನಗುಮುಖ ಎಲ್ಲರ ಗಮನ ಸೆಳೆಯುವಂತಿರಬೇಕು ಅನ್ನೋ ಆಸೆ ನಿಮ್ಮದಾಗಿದ್ದರೆ, ನೀವು ಖಂಡಿತವಾಗಿಯೂ ವಿಟಾಮಿನ್ ಸಿ ಅಂಶವಿರುವ ಆಹಾರ ಸೇವಿಸಲೇಬೇಕು. ಏಕೆಂದರೆ, ದೇಹದಲ್ಲಿ ವಿಟಾಮಿನ್ ಸಿ ಅಂಶ ಕಡಿಮೆ ಇದ್ದರೆ, ನಮ್ಮ ಹಲ್ಲುಗಳು ಕೂಡ ಹಳದಿಗಟ್ಟುತ್ತದೆ. ಬೇಗ ಉದುರಿಹೋಗುವ ಸಂಭವವಿರುತ್ತದೆ. ಹಾಗಾಗಿ ವಿಟಾಮಿನ್ ಸಿ ಅಂಶ ನಮ್ಮ ದೇಹಕ್ಕೆ ಅತ್ಯಗತ್ಯವಾಗಿದೆ.
ಇನ್ನು ದೇಹಕ್ಕೆ ವಿಟಾಮಿನ್ ಸಿ ಬೇಕಾದ್ರೆ, ನಾವು ಯಾವ ಆಹಾರವನ್ನು ಸೇವಿಸಬೇಕು ಎಂದು ನೋಡುವುದಾದರೆ, ಕಿತ್ತಳೆ ಹಣ್ಣು, ನಿಂಬೆಹಣ್ಣು, ಪೇರಲೆ, ಪಪ್ಪಾಯಿ, ಆಲೂಗಡ್ಡೆ, ಬ್ರೋಕೋಲಿ, ನವಿಲುಕೋಸು, ಇಂಥ ತರಕಾಾರಿ, ಹಣ್ಣಿನ ಸೇವನೆ ಮಾಡಿದ್ರೆ, ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ವೀಡಿಯೋ ನೋಡಿ.