Health Tips: ನಮ್ಮಲ್ಲಿ ಎಷ್ಟೋ ಜನ ಆಹಾರವನ್ನು ಗಡಿಬಿಡಿಯಲ್ಲಿ ತಿನ್ನುತ್ತಾರೆ. ಅದರಲ್ಲೂ ಕೆಲಸಕ್ಕೆ ಹೋಗುವವರದ್ದು ಪ್ರತಿದಿನ ಇದೇ ಗೋಳು. ಆದರೆ ನಾವು ಗಡಿಬಿಡಿಯಲ್ಲಿ ಆಹಾರ ಸೇವಿಸಿದರೆ, ಆರೋಗ್ಯ ಸಮಸ್ಯೆ ಫಿಕ್ಸ್ ಅಂತಲೇ ಅರ್ಥ. ಹಾಗಾಗಿ ನಾವಿಂದು ನಿಧಾನವಾಗಿ ಏಕೆ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ.
ಯಾಕೆ ನಿಧಾನವಾಗಿ ಆಹಾರ ಸೇವನೆ ಮಾಡಬೇಕು ಎಂದರೆ, ನಿಮ್ಮ ಆರೋಗ್ಯ ಚೆನ್ನಾಗಿರಬೇಕು. ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು ಅಂದ್ರೆ, ಗ್ಯಾಸ್ಟಿಕ್ ಸೇರಿ ಯಾವುದೇ ಉದರ ಸಮಸ್ಯೆ ಉದ್ಭವಿಸಬಾರದು ಅಂದ್ರೆ ನೀವು ನಿಧನವಾಗಿ, ಅಗಿದು ಅಗಿದು ಆಹಾರ ಸೇವನೆ ಮಾಡಬೇಕು.
ಅಲ್ಲದೇ ಬೇಗ ಬೇಗ ತಿನ್ನುವುದರಿಂದ ದೇಹದ ತೂಕ ಅನಾರೋಗ್ಯಕರವಾಗಿ ಹೆಚ್ಚಾಗುತ್ತದೆ. ಹಾಗಾಗಿಯೇ ನೀವು ಆಹಾರ ಸೇವನೆಗಾಗಿಯೇ 20 ನಿಮಿಷ ತೆಗೆದುಕ“ಳ್ಳಿ. ನಿಧಾನವಾಗಿ ಅಗಿದು ಆಹಾರ ಸೇವನೆ ಮಾಡಿದರೆ, ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಕೆಲಸಕ್ಕೆ ಲೇಟ್ ಆಯ್ತು, ಅಥವಾ ಯಾರಾದರೂ ಏನಾದ್ರೂ ಅಂತಾರೋ ಅಂತಾ, ನೀವು ಬಕಾ ಬಕಾ ಅಂತಾ ಊಟ ಮಾಡಿದರೆ, ನಿಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ನಿಮ್ಮ ಆರೋಗ್ಯದ ಕಾಳಜಿ ನೀವು ಮಾತ್ರ ವಹಿಸಬೇಕು.
ಇನ್ನು ಆಹಾರ ಸೇವಿಸುವಾಗ ಆದಷ್ಟು ಕೈಯಿಂದ ತಿನ್ನಲು ಪ್ರಯತ್ನಿಸಿ. ಸ್ಪೂನ್ ಬಳಕೆ ಕಡಿಮೆ ಮಾಡಿ. ನಾವು ಕೈಯಿಂದ ಊಟ ಮಾಡಿದಾಗ, ನಮ್ಮ ಕೈ ಮೆದುಳಿಗೆ ಕನೆಕ್ಟ್ ಆಗುತ್ತದೆ. ಮತ್ತು ಅದು ನಮ್ಮ ಜೀರ್ಣಾಂಗಕ್ಕೆ ಸಂದೇಶ ನೀಡುತ್ತದೆ. ಹಾಗಾಗಿಯೇ ಯಾರು ಕೈ ಬಳಸಿ, ನಿಧಾನವಾಗಿ ಆಹಾರ ಸೇವಿಸುತ್ತಾರೋ, ಅವರ ಆರೋಗ್ಯ ಸದಾಕಾಲ ಅತ್ಯುತ್ತಮವಾಗಿರುತ್ತದೆ.