Health Tips: ಶಿಶುಗಳು ಜನಿಸಿದ 2ದಿನಕ್ಕೆ ಮಕ್ಕಳ ದೇಹ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಜಾಂಡೀಸ್ ಅಂತಾನೇ ಹೇಳಲಾಗುತ್ತದೆ. ಹಾಗಾಗಿ ಮಕ್ಕಳಿಗೆ ಅದರದ್ದೇ ಆದ ಚಿಕಿತ್ಸೆ ನೀಡಲಾಗುತ್ತದೆ. ಹಾಗಾದ್ರೆ ಹೀಗೆ ಜನಿಸಿದ ಕೆಲ ದಿನಕ್ಕೆ ಜಾಂಡೀಸ್ ಬರಲು ಕಾರಣವೇನು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
ಡಾ.ಪ್ರಿಯ ಶಿವಳ್ಳಿ ಅವರು ಈ ಬಗ್ಗೆ ವಿವರಿಸಿದ್ದು, ಲಿವರ್ ಸಮಸ್ಯೆ ಇದ್ದಲ್ಲಿ ಜಾಂಡೀಸ್ ಸಮಸ್ಯೆ ಬರುತ್ತದೆ. ಲಿವರ್ ಇನ್‌ಫೆಕ್ಷನ್ ಇದ್ದರೂ ಕೂಡ ಜಾಯಿಂಡೀಸ್ ಬರುತ್ತದೆ. ರಕ್ತದಲ್ಲಿ ಸೀರಮ್ ಬಿಲಿರುಬಿನ್ ಎನ್ನುವ ಅಂಶ ಹೆಚ್ಚಾದಾಗ ಜಾಂಡೀಸ್ ಬರುತ್ತದೆ ಅಂತಾರೆ ವೈದ್ಯರು.
ವೈರಲ್ ಇನ್‌ಫೆಕ್ಷನ್ ಕೂಡ ಇದಕ್ಕೆ ಕಾರಣವಾಗಿದೆ. ಮೆಡಿಸಿನ್ ಹೆಚ್ಚಾದಾಗಲೂ ಜಾಂಡೀಸ್ ಬರುತ್ತದೆ. ನೀವು ಮಕ್ಕಳಿಗೆ ನೀಡುವ ಔಷಧಿಯಲ್ಲಿ ದೋಷವಿದ್ದರೂ ರೋಗ ಬರುತ್ತದೆ. ಅನುವಂಶಿಕವಾಗಿಯೂ ಜಾಂಡೀಸ್ ಬರುತ್ತದೆ. ಗರ್ಭಾವಸ್ಥೆಯಲ್ಲಿರುವಾಗ ಅಥವಾ ನಿಮ್ಮ ಮಕ್ಕಳು ಬೀದಿ ಬದಿ ತಿಂಡಿ ತಿಂದಾಗ ಇಂಥ ರೋಗಗಳು ಬರುತ್ತದೆ. ಹಾಗಾಗಿ ಆರೋಗ್ಯಕರ ಆಹಾರಗಳನ್ನು ಸೇವಿಸಿ ಅಂತಾರೆ ವೈದ್ಯರು.
ನೀರು ಕೂಡ ಕುದಿಸಿ, ಆರಿಸಿ ಸೇವಿಸಬೇಕು. ವಾಶ್‌ರೂಮ್‌ಗೆ ಹೋಗಿ ಬಂದ ಬಳಿಕ ಚೆನ್ನಾಗಿ ಹ್ಯಾಂಡ್ ವಾಶ್ ಮಾಡಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

