Health Tips: ಕೋವಿಡ್ ಅಂದ್ರೆ ಸಾಕು ಇಡೀ ಪ್ರಪಂಚವೇ ನಡುಗುತ್ತದೆ. ಯಾಕಂದ್ರೆ ಕೋವಿಡ್ ತಂದಿರಿಸಿದ್ದ ಭಯ ಅಂಥದ್ದು. ಆ ಸಮಯದಲ್ಲಿ ಜೀವ ಉಳಿದರೆ ಸಾಕು ಅನ್ನುವಂತಿತ್ತು ನಮ್ಮೆಲ್ಲರ ಪರಿಸ್ಥಿತಿ. 1 ಕಡೆ ದುಡಿಮೆ, ಆಹಾರ ಇಲ್ಲದೇ ಬದುಕುವ ಪರಿಸ್ಥಿತಿ. ಇನ್ನ“ಂದು ಕಡೆ ಜೀವ ಉಳಿಸಿಕ“ಳ್ಳಲು ಪರದಾಡುವ ಪರಿಸ್ಥಿತಿ. ಹಾಗಾಗಿ ಜನ ಕೋವಿಡ್ ಅನ್ನೋ ಹೆಸರು ಕೇಳಿದ್ರೇನೆ ಬೆಚ್ಚಿ ಬೀಳ್ತಾರೆ.
ವೈದ್ಯರು ಹೇಳುವ ಪ್ರಕಾರ ನಾವು ಇಂದಿಗೂ ಜ್ವರ ಬಂದಾಗ ಅದನ್ನು ನಿರ್ಲಕ್ಷಿಸಬಾರದು. 1ರಿದ 2 ದಿನ ಮನೆಮದ್ದು, ಪ್ಯಾರಾಸಿಟಮಲ್ ಮಾತ್ರೆ ಸೇರಿ, ಕೆಲ ಮದ್ದು ಮಾಡಿದ್ರೂ ನಿಮ್ಮ ಆರೋಗ್ಯ ಸರಿಯಾಗದಿದ್ದಲ್ಲಿ, ಖಂಡಿತವಾಗಿಯೂ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು ಅಂತಾರೆ ವೈದ್ಯರು.
ಇನ್ನು ಸೊಳ್ಳೆ ಬಾರದಂತೆ ನೋಡಿಕ“ಳ್ಳಬೇಕು. ಮನೆಯ ಬಳಿ ಕ್ಲೀನ್ ಆಗಿರಿಸಿ. ಏಕೆಂದರೆ ಢೆಂಗ್ಯೂ ಜ್ವರ ಬಂದರೆ, ಅದು ನಮ್ಮ ಜೀವ ತೆಗೆಯಬಹುದು. ಹಾಗಾಗಿ ಡೆಂಘ್ಯೂ ಸೊಳ್ಳೆ ನಿಮ್ಮ ಮನೆಯ ಬಳಿ ಬಾರದಂತೆ ನೋಡಿಕ“ಳ್ಳಿ. ಮಳೆ ಬಂದು ನೀರು ನಿಂತಲ್ಲಿ, ಅಥವಾ ಯಾವುದೇ ಕಾರಣದಿಂದಲೂ ನೀರು ನಿಂತರೆ ಅದನ್ನು ಕ್ಲೀನ್ ಮಾಡಿ. ಇಲ್ಲದಿದ್ದರೆ ಡೆಂಘ್ಯೂ ಸೊಳ್ಳೆ ಇಡುವ ಎಗ್‌ನಿಂದ ರಾಶಿ ರಾಶಿ ಸೊಳ್ಳೆ ಆಗುತ್ತದೆ. ಅದು ಕಚ್ಚುವುದರಿಂದ ಡೆಂಘ್ಯೂ ಜ್ವರ ಬರುತ್ತದೆ. ಹಾಗಾಗಿ ಯಾವುದೇ ರೀತಿಯ ಜ್ವರವನ್ನು ನೀವು ನಿರ್ಲಕ್ಷ್ಯ ಮಾಡುವಂತಿಲ್ಲ.




