Thursday, February 6, 2025

Latest Posts

Wild tamarind : ಇಲಾಚಿ ಹಣ್ಣಿನ ಆರೋಗ್ಯಕರ ಪ್ರಯೋಜನಗಳಿವು..?!

- Advertisement -

Health Tips : ಥೇಟ್ ಹುಣಸೆ ಹಣ್ಣಿನಂತೆ ಕಾಣುವ ಈ ಹಣ್ಣು ಹುಣಸೆ ಹಣ್ಣು ಅಲ್ಲ ಆದ್ರೆ ಇದರ ಆರೋಗ್ಯ ಪ್ರಯೋಜನ ಅಂತೂ ಸಿಕ್ಕಾಪಟ್ಟೆ  ಹಾಗಿದ್ರೆ ಯಾವುದು ಆ ಹಣ್ಣು ಇದರ ಉಪಯೋಗ ಏನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…..

ಕಾಡು ಹುಣಸೆ, ಸೀಮೆ ಹುಣಸೆ, ಸಿಹಿ ಹುಣಸೆ ಹೀಗೆ ವಿಭಿನ್ನ ಹೆಸರುಗಳಿಂದ ಕರೆಯಲ್ಪಡುವ ಈ ಇಲಾಚಿ ಹಣ್ಣು ನೋಡುವುದಕ್ಕೆ ಹುಣಸೆ ಹಣ್ಣಿನಂತೆ ಕಾಣಿಸುತ್ತದೆ. ಆದರೆ ಇದರಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿದೆ. ಭಾರತಾದ್ಯಂತ ಕಂಡುಬರುವ ಈ ಹಣ್ಣನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ಇದು ಮುಳ್ಳಿನ ಮರಗಳಲ್ಲಿ ಕಂಡುಬರುತ್ತದೆ. ನೋಡಲು ವಕ್ರವಾಗಿ ಕಾಣುವುದರಿಂದ ಇದನ್ನು ಕಾಡು ಹುಣಸೆ ಎಂದು ಕರೆಯಲಾಗುತ್ತದೆ. ಈ ಇಲಾಚಿ ಹಣ್ಣು ಬಾಯಲ್ಲಿ ಇಟ್ಟರೆ ಕರಗುತ್ತದೆ. ಜೊತೆಗೆ ಇಲಾಚಿ ಹಣ್ಣಿನ ಆರೋಗ್ಯ ಪ್ರಯೋಜನಗಳೆನು ಎಂಬುವುದನ್ನೂ ತಿಳಿದುಕೊಳ್ಳೋಣ :

ಇಲಾಚಿ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು, ರಂಜಕ, ಪೊಟ್ಯಾಸಿಯಮ್, ಕಬ್ಬಿಣ, ಥಯಾಮಿನ್, ರೈಬೋಫ್ಲಾವಿನ್ ಮುಂತಾದ ಅನೇಕ ಪೋಷಕಾಂಶಗಳು ಇದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ: ಇಲಾಚಿ ಹಣ್ಣು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಮಧುಮೇಹವನ್ನು ನಿಯಂತ್ರಿಸುತ್ತದೆ. ಇದರಲ್ಲಿ ಹಲವು ಬಗೆಯ ಆ್ಯಂಟಿಆಕ್ಸಿಡೆಂಟ್ಗಳಿವೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಎಲೆಗಳು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿವೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತೆ: ಈ ಸೀಮೆ ಹುಣಸೆಹಣ್ಣು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಇದು ಹೊಟ್ಟೆ ಉಬ್ಬುವಿಕೆ, ಗ್ಯಾಸ್ಟ್ರಿಕ್ಟ್ ಮತ್ತು ಅಜೀರ್ಣವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಹೊಟ್ಟೆ ಚೆನ್ನಾಗಿ ಸ್ವಚ್ಛವಾಗುತ್ತದೆ.

ಹೃದಯವನ್ನು ಆರೋಗ್ಯವಾಗಿಡುತ್ತೆ: ಇಲಾಚಿ ಹಣ್ಣು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಹೃದಯವನ್ನು ಆರೋಗ್ಯಕರವಾಗಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ: ಇಲಾಚಿ ಹಣ್ಣು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ವ್ಯಕ್ತಿಯನ್ನು ಅನೇಕ ರೋಗಗಳು ಮತ್ತು ಸೋಂಕುಗಳಿಂದ ರಕ್ಷಿಸಬಹುದು. ವಿಟಮಿನ್ ಸಿ ದೇಹದಲ್ಲಿ ಉತ್ತಮ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ದೇಹವು ವಿವಿಧ ರೀತಿಯ ಹಾನಿಕಾರಕ ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಆಲೂಗಡ್ಡೆ ಕಟ್ಲೇಟ್ ರೆಸಿಪಿ

ಕೇರಳ ಸ್ಟೈಲ್ ಅವಿಲ್ ರೆಸಿಪಿ..

ಸ್ಪೆಶಲ್ ಖಾರಾ ಖಿಚಡಿ ರೆಸಿಪಿ

- Advertisement -

Latest Posts

Don't Miss