Health tips: ತುಳಸಿಗೆ ಹಿಂದೂ ಧರ್ಮದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ತುಳಸಿಯನ್ನು ದೇವಿಯ ರೂಪವಾಗಿ ನಾವು ಪೂಜಿಸುತ್ತೇವೆ. ತುಳಸಿ ಗಿಡಕ್ಕೆ ಪ್ರತಿದಿನ ನೀರೆರೆದು, ಪೂಜೆ ಮಾಡುತ್ತೇವೆ. ಆದರೆ ಈ ತುಳಸಿ ಬರೀ ಪೂಜೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಇದರ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ಸಿಗುತ್ತದೆ. ನಾಲ್ಕು ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ, ಕಶಾಯ ಮಾಡಿ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಮಾಯವಾಗುತ್ತದೆ. ಈ ಬಗ್ಗೆ ತಿಳಿಯೋಣ ಬನ್ನಿ..
ಈ ತುಳಸಿ ಕಶಾಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ. ಪದೇ ಪದೇ ನೆಗಡಿ, ಕೆಮ್ಮು, ಜ್ವರ ಬರುತ್ತಿದೆ ಎಂದರೆ, ನೀವು ನೀರು ಕುದಿಸಿ, ಅದಕ್ಕೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆ ಮತ್ತು ತುಳಸಿ ಹಾಕಿ ಕುದಿಸಿ, ಕಶಾಯ ಮಾಡಿ ಕುಡಿಯಿರಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಇನ್ನು ಕ್ಯಾನ್ಸರ್, ಹೆಚ್ಐವಿಯಂಥ ಮಾರಣಾಂತಿಕ ಖಾಯಿಲೆ ಬರುವುದನ್ನು ಕೂಡ ತುಳಸಿ ಎಲೆ ತಡೆಯುತ್ತದೆ. ಹಾಗಾಗಿಯೇ ತುಳಸಿ ಕಶಾಯ ಸೇವನೆ ಮಾಡುವವರು ಸದಾ ಆರೋಗ್ಯವಾಗಿರುತ್ತಾರೆ. ಆದರೆ ತುಳಸಿ ಕಶಾಯ ಮಾಡುವ ಮುನ್ನ ತುಳಸಿಯನ್ನು ಸ್ವಚ್ಛವಾಗಿ ತ“ಳೆಯಬೇಕು.
ನಿಮಗೆ ಚರ್ಮದ ಸೋಂಕು, ಪದೇ ಪದೇ ಇನ್‌ಫೆಕ್ಶನ್ ಆಗುವುದೆಲ್ಲ ಆದರೆ, ನೀವು ತುಳಸಿ ಕಶಾಯ ಸೇವಿಸಬಹುದು ಅಥವಾ ತುಳಸಿಯನ್ನು ಅರೆದು, ಫಂಗಸ್, ಗುಳ್ಳೆ, ಇನ್‌ಫೆಕ್ಷನ್ ಆದಲ್ಲಿ ಹಚ್ಚಿಕ“ಳ್ಳಬಹುದು. ಇದರಿಂದ ನಿಮ್ಮ ಚರ್ಮ ಆರೋಗ್ಯವಾಗಿರುತ್ತದೆ.
ನಿಮಗೆ ಲೋಬಿಪಿ ಅಥವಾ ಹೈ ಬಿಪಿ ಇದ್ದಲ್ಲಿ, ನೀವು ತುಳಸಿ ಕಶಾಯ ಅಥವಾ ತುಳಸಿ ಎಲೆ ಸೇವನೆ ಮಾಡುತ್ತ ಬಂದರೆ, ನಿಮ್ಮ ಬಿಪಿ ಕಂಟ್ರೋಲಿಗೆ ಬರುತ್ತದೆ. ಅಥವಾ ನಿಮಗೇನೂ ಇಲ್ಲದಿದ್ದರೂ ತುಳಸಿ ಸೇವನೆಯ ಅಭ್ಯಾಸ ನಿಮಗಿದ್ದಲ್ಲಿ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಬೆಳಿಗ್ಗೆ ಖಾಲಿ ಹ“ ಟ್ಟೆಯಲ್ಲಿ ಈ ಕಶಾಯ ಸೇವನೆ ಮಾಡಬೇಕು.
ಇನ್ನು ಬಿಪಿ ಸಮಸ್ಯೆ ಇದ್ದವರಿಗೆ ಉಸಿರಾಟದ ಸಮಸ್ಯೆಯೂ ಇರುತ್ತದೆ. ಅಂಥವರು ಕೂಡ ತುಳಸಿ ಕಶಾಯ ಸೇವನೆ ಮಾಡಬಹುದು. ಇದು ಶ್ವಾಸಕೋಶದಲ್ಲಿರುವ ಕಸವನ್ನು ಕ್ಲೀನ್ ಮಾಡಿ, ಉಸಿರಾಡಲು ಸಹಾಯ ಮಾಡುತ್ತದೆ.
ಬರೀ ಬಿಪಿ ಕಂಟ್ರೋಲ್ ಮಾಡುವುದು ಮಾತ್ರವಲ್ಲದೇ, ಇದು ಶುಗರ್ ಕೂಡ ಕಂಟ್ರೋಲಿನಲ್ಲಿಡುತ್ತದೆ. ದೇಹದಲ್ಲಿರುವ ರಕ್ತವನ್ನು ಶುದ್ಧಗ“ಳಿಸುತ್ತದೆ. ಬ್ಯಾಡ್ ಕ“ಲೆಸ್ಟ್ರಾಲ್ ಕಡಿಮೆ ಮಾಡಿ, ನಿಮ್ಮ ದೇಹದ ತೂಕವನ್ನು ಸರಿಯಾಗಿ ಇಡುವಲ್ಲಿ ಸಹಕಾರಿಯಾಗಿದೆ.
ನಿಮಗೆ ತುಳಸಿ ಸೇವನೆ ಮಾಡಿದ್ರೇನೇ ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ಬಳಿಕ ತುಳಸಿ ಸೇವನೆ ಮಾಡುವುದು ಉತ್ತಮ.