Health Tips: ಹಲವರು ಆಹಾರ ಸೇವನೆ ಮಾಡಿದ ತಕ್ಷಣ ನಿದ್ದೆ ಮಾಡಲೋ, ಅಥವಾ ಬರೀ ಮಲಗಿ ಸಮಯ ಕಳೆಯಲೋ ಹೋಗುತ್ತಾರೆ. ಆದರೆ ಇದು ಉತ್ತಮವಾದ ಅಭ್ಯಾಸವಲ್ಲ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದರಲ್ಲೂ ಉದರಕ್ಕೆ ಸಂಬಂಧಿಸಿದ ಸಮಸ್ಯೆ ಉದ್ಭವಿಸುತ್ತದೆ. ಹಾಗಾದ್ರೆ ಆಹಾರ ಸೇವನೆಯ ಬಳಿಕ ಮಲಗಿದರೆ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಊಟವಾದ ತಕ್ಷಣ ಮಲಗಬೇಕು ಹೌದು. ಆದರೆ ಅದರ ಮಧ್ಯೆ ಸ್ವಲ್ಪ ಗ್ಯಾಪ್ ಇರಬೇಕು. ಆ ಗ್ಯಾಪ್ನಲ್ಲಿ ನೀವು ಸಣ್ಣ ವಾಕಿಂಗ್ ಮಾಡಬೇಕು. ಅಥವಾ ಕುಳಿತುಕ“ಳ್ಳಬೇಕು. ಇದರಿಂದ ಸೇವಿಸಿದ ಆಹಾರ, ಬೇಗ ಮತ್ತು ಆರಾಮವಾಗಿ ಜೀರ್ಣವಾಗುತ್ತದೆ.
ನೀವು ಊಟ ಮಾಡಿದ ತಕ್ಷಣ ಮಲಗಿದರೆ, ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದಲೇ ಗ್ಯಾಸ್ಟಿಕ್ ಸಮಸ್ಯೆ ಸೇರಿ ಹಲವು ಉದರ ಸಮಸ್ಯೆ ಉದ್ಭವಿಸುತ್ತದೆ.
ನೀರು ಕುಡಿಯುವಾಗಲೂ ಹಾಗೇ. ನೀವು ಆಹಾರ ಸೇವಿಸಿದ ತಕ್ಷಣ ಅಥವಾ ಆಹಾರ ಸೇವಿಸುವ ಮಧ್ಯೆ ನೀರು ಕುಡಿಯಬಾರದು. ಆಹಾರ ಸೇವಿಸಿ ಅರ್ಧ ಅಥವಾ 1 ಗಂಟೆಯಾದ ತಕ್ಷಣ ನೀರು ಕುಡಿಯಬೇಕು.




