Sunday, September 8, 2024

Latest Posts

ರೋಗನಿರೋಧಕ ಶಕ್ತಿ ಹೆಚ್ಚಳದ ಕಡೆ ಗಮನ ಕೊಡಿ.. ಕೋವಿಡ್ ಬಗ್ಗೆ ಭಯ ಬಿಡಿ..

- Advertisement -

www.karnatakatv.net ಐಪಿಎಲ್ ಸೀಸನ್ 1,2,3,4 ಅನ್ನೋ ರೀತಿ ಇದೀಗ ಓರೊನಾ ಸಹ ಸೀರಿಸ್ ಬರೋಕೆ ಶುರು ಮಾಡಿದೆ. ಇದುವರೆಗೂ ಬಂದ ಎರಡೂ ಅಲೆಯಿಂದ ಬಚಾವಾಗಿದ್ದಾರೆ. ಮತ್ತೆ ಕೆಲವರು ಸಿಲುಕಿ ತತ್ತರಿಸಿದ್ದಾರೆ.. ಸೋಂಕು ತಗುಲಿದರೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ರೆ ಇಂಥಹ ೧೦ ಅಲ್ಲ ನೂರು ಕೊರೊನಾ ಅಲೆ ಬಂದರೂ ಏನೂ ಮಾಡಲಾಗುವುದಿಲ್ಲ.. ಹಾಗಾಗಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಅಂದ್ರೆ, ಸಾಧ್ಯವಾದಷ್ಟು ಮನೆಲ್ಲೇ ತಯಾರಿಸಿದ ಆಹಾರವನ್ನ ತಿನ್ನಬೇಕು.. ಬಹುಮುಖ್ಯವಾಗಿ ನಮ್ಮಲ್ಲಿ ದೊರಕುವ ಕಾಳುಗಳನ್ನ ಅಡುಗೆಯಲ್ಲಿ ಬಳಸಬೇಕು.. ಯಾಕಂದ್ರೆ ಪ್ರತಿಯೊಂದು ಕಾಳುಗಳು ದೇಹಕ್ಕೆ ಬೇರೆ ಬೇರೆ ಅಗತ್ಯ ಅಂಶಗಳನ್ನ ಒದಗಿಸುತ್ತದೆ. ಅದರಲ್ಲೂ ರಾಗಿ ಸೇರಿದಂತೆ ಸಿರಿಧಾನ್ಯಗಳ ಬಳಕೆ ನಮ್ಮಲ್ಲಿ ರೋಗ ನಿರೊಧಕ ಶಕ್ತಿಯನ್ನ ಹೆಚ್ಚಿಸುತ್ತದೆ. ಅಷ್ಟಕ್ಕೂ ನಮ್ಮ ಆರೋಗ್ಯ ವೃದ್ಧಿಗೆ ಸಿರಿಧಾನ್ಯಗಳು ಹೇಗೆ ಸಹಕಾರಿಯಾಗುತ್ತದೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ

ರಾಗಿ :ಕರ್ನಾಟಕದಲ್ಲಿ ಅತಿ ಹೆಚ್ಚು ಬಳಕೆಯಾಗೋ ಸಿರಿಧಾನ್ಯದಲ್ಲಿ ರಾಗಿ ಮೊದಲನೆ ಸ್ಥಾನ ಪಡೆದುಕೊಳ್ಳುತ್ತೆ. ರಾಗಿ ಫೈಬರ್ ಅಂಶ ಕೂಡ ಸಮೃದ್ಧವಾಗಿದ್ದು, ಆಹಾರದ ಹಂಬಲವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ದೇಹದ ತೂಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸೋದಕ್ಕೆ ರಾಗಿ ಬಲು ಉಪಯುಕ್ತ. ಚರ್ಮ ಸುಕ್ಕುಗಟ್ಟುವಿಗೆಯನ್ನ ತಡೆದು, ಯೌವ್ವನವನ್ನು ಕಾಪಾಡಿಕೊಳ್ಳೋದಕ್ಕೆ ರಾಗಿ ಸಹಕಾರಿಯಾಗುತ್ತೆ. ಇನ್ನು ನೈಸರ್ಗಿಕ ಕಬ್ಬಿಣಾಂಶದ ಅತ್ಯುತ್ತಮ ಬಂಡಾರವಾಗಿರೋ ರಾಗಿ ಸೇವನೆಯಿಂದ ರಕ್ತಹೀನತೆ ದೂರಾಗುತ್ತೆ.

ನವಣೆ : ಖನಿಜಾಂಶ, ನಾರಿನಾಂಶ ಯುಕ್ತವಾದ ನವಣೆ ಸೇವನೆಯಿಂದ ದೇಹದ ಕೊಬ್ಬು ಕರಗುತ್ತೆ. ಅಲ್ಲದೆ ಪೈಲ್ಸ್, ಮಲಬದ್ಧತೆಯಂತಹ ಸಮಸ್ಯೆಗಳನ್ನ ಬಾರದಂತೆ ತಡೆಯೋ ಗುಣ ನವಣೆಗಿದೆ. ಇನ್ನು ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿರೋದ್ರಿಂದ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತೆ. ಇನ್ನು ಗರ್ಭಿಣಿಯರಿಗೆ ಹೇಳಿ ಮಾಡಿಸಿದ ಆಹಾರವಾಗಿದ್ದು, ಇದರ ಸೇವನೆಯಿಂದ ಅಂಗಾಗಗಳ ಯಾವುದೇ ನೋವು ನಿವಾರಣೆಯಾಗುತ್ತೆ.

ಕೊರಲೆ : ತಿಳಿ ಹಸಿರು ಬಣ್ಣದ ಕೊರಲೆ ಅಕ್ಕಿ ಪಚನಾಂಗಗಳ ಕಾರ್ಯ ಸುಲಭಗೊಳಿಸುತ್ತೆ. ಅಧಿಕ ಪ್ರಮಾಣದ ನಾರಿನಾಂಶ ಪಚನ ಕ್ರಿಯೆಯನ್ನ ಸರಾಗಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತೆ.

ಆರ್ಕ : ದೇಹದಲ್ಲಿನ ರಕ್ತ ಶುದ್ಧಿ ಮಾಡೋ ಗುಣ ಹೊಂದಿರೋ ಆರ್ಕ ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗ್ತಿದೆ. ಇನ್ನು ರಕ್ತ ಶುದ್ಧೀಕರಣಗೊಳಿಸೋ ಅತ್ಯಂತ ಶ್ರೇಷ್ಠ ಗುಣ ಹೊಂದಿರೋ ಇದರ ಸೇವನೆಯಿಂದಾಗಿ ರಕ್ತಕ್ಕೆ ಸಂಬAಧಿಸಿದ ರೋಗಗಳಾಗಲಿ, ಚರ್ಮ ವ್ಯಾಧಿಗಳಾಲೀ ಹತ್ತಿರ ಸುಳಿಯೋದಿಲ್ಲ. ಹಾರಕದಲ್ಲಿ ನಾರು, ಕಬ್ಬಿಣಾಂಶ ಸೇರಿದಂತೆ ಹಲವು ಬಗೆಯ ಪೌಷ್ಟಿಕಾಂಶಗಳಿವೆ. ಅದರಲ್ಲೂ ಮುಖ್ಯವಾಗಿ ಇದರ ಸೇವನೆಯಿಂದ ಕ್ಯಾನ್ಸರ್, ಮಧುಮೇಹ ಮತ್ತು ಮಲ್ಲಬದ್ಧತೆಯನ್ನು ನಿಯಂತ್ರಿಸಬಹುದು.

ಊದಲು : ಬಿಳಿ ಬಣ್ಣದ ಊದಲು ಅಕ್ಕಿ ಲಿವರ್ ಶುದ್ಧೀಕರಣಕ್ಕೆ ಸಹಕಾರಿಯಾಗುತ್ತೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿರೋ ಲಿವರ್ ಸಮಸ್ಯೆಯಿಂದ ಜನರು ಗುಣವಾಗೋದು ಕಷ್ಟ. ಹೀಗಾಗಿ ದಿನನಿತ್ಯದ ಆಹಾರದಲ್ಲಿ ಊದಲನ್ನ ಬಳಕೆ ಮಾಡಿದ್ರೆ ಲಿವರ್ ಸಮಸ್ಯೆ, ಸಕ್ಕರೆ ಖಾಯಿಲೆ ಸೇರಿದಂತೆ ಇದು ಪ್ರಾಕೃತಿಕ ಔಷಧವಾಗಿ ಕೆಲಸ ಮಾಡುತ್ತೆ.ಊದಲು ತಿನ್ನೋರ್ಗೆ ಉಬ್ಬಸಾ ಇಲ್ಲ ಅನ್ನೋ ಗಾದೆ ಮಾತಿನಂತೆ ಶ್ವಾಸಕೋಶವನ್ನು ನಾನಾ ಸೋಂಕಿನಿAದ ತಡೆದು ಉಬ್ಬಸ, ಕೆಮ್ಮು, ಅಸ್ತಮಾದಂತಹ ಖಾಯಿಲೆಗಳನ್ನು ತಡೆಯುತ್ತೆ.

ಸಾಮೆ : ಸಾಮೆ ಅಕ್ಕಿ ಸೇವನೆಯಿಂದ ಸಂತಾನೋತ್ಪತ್ತಿಗೆ ಸಂಬAಧಿಸಿದ ತೊಂದರೆಗಳು ನಿವಾರಣೆಯಾಗುತ್ತೆ. ಹೆಣ್ಣು ಮಕ್ಕಳಲ್ಲಿ ಅಂಡಾಶಯದಲ್ಲಿನ ಸಮಸ್ಯೆಯನ್ನ ಸರಿಪಡಿಸೋ ಗುಣ ಹೊಂದಿದೆ. ಹಾಗೆಯೇ ಗಂಡು ಮಕ್ಕಳಲ್ಲಿ ವೀರ್ಯಾಣುಗಳ ಪ್ರಮಾಣವನ್ನು ಹೆಚ್ಚಳ ಮಾಡುತ್ತೆ.

ಬರಗು ; ಪ್ರೋಟೀನ್ ಅಂಶವು ಗೋಧಿಯಂತೆಯೇ ಇದ್ದರೂ ಕೂಡ ಬರಗುಅತ್ಯುನ್ನತ ಗುಣಮಟ್ಟದ ಪ್ರೋಟೀನ್ ಮೂಲವೆಂದು ಪರಿಗಣಿಸಲಾಗುತ್ತೆ. ಏಕೆಂದರೆ ಇದರಲ್ಲಿ ಅಗತ್ಯ ಅಮೈನೋ ಆಸಿಡ್ ಗಳು. ಇದು ಗ್ಲುಟೇನ್ ರಹಿತವಾದುದು. ತಿನ್ನೋದಕ್ಕೂ ಬಲು ರುಚಿಕರವಾಗಿರುತ್ತೆ.

ಇದನ್ನೆಲ್ಲ ತಂದು ಅಡುಗೆ ಮಾಡಿ ತಿನ್ನಲು ಸಾಧ್ಯವಾಗದಿದ್ರೆ 9 ಸಿರಿಧಾನ್ಯಗಳು ಹಾಗೂ 15 ರೀತಿಯ ಕಾಳುಗಳ ಮಿಶ್ರಣವಾದ ಜೀನಿ (JEENI MILLET HEALTH MIX )ಬಳಸೋದ್ರಿಂದ ಇದೆಲ್ಲಾ ಲಾಭ ನಿಮ್ಮ ದೇಹಕ್ಕೆ ಸಿಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ..

- Advertisement -

Latest Posts

Don't Miss