HEART ATTACK! | ಗಂಡಸರಲ್ಲಿ ಹೆಂಗಸರಲ್ಲಿ ವ್ಯತ್ಯಾಸ ಏನು? : Health Tips by Dr . Pavan

Health Tips: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಕಳೆದ ವರ್ಷವನ್ನು ಹೃದಯಾಘಾತದ ವರ್ಷ ಅಂತಲೇ ಕರೆಯಲಾಗಿತ್ತು. ಏಕೆಂದರೆ, ಆ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು.

ವೈದ್ಯರಾಗಿರುವ ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ಹೃದಯಾಘಾತವಾದಾಗ ಹೆಂಗಸರಲ್ಲಿ ಮತ್ತು ಗಂಡಸರಲ್ಲಿ ಕಾಣುವ ವ್ಯತ್ಯಾಸವೇನು ಅಂತಾ ಹೇಳಿದ್ದಾರೆ. ಸಾಮಾನ್ಯವಾಗಿ ಹೃದಯಾಘಾತವಾದಾಗ, ಎದೆ ನೋವು ಬರುತ್ತದೆ. ಎದೆ ಭಾರ ಭಾರ ಎನ್ನಿಸುತ್ತದೆ. ಬೆನ್ನಲ್ಲೂ ನೋವು ಕಾಣಿಸಿಕ`ಳ್ಳುತ್ತದೆ. ಭುಜ, ಕುತ್ತಿಗೆ ಹೀಗೆ ಎಲ್ಲ ಭಾಗದಲ್ಲೂ ನೋವಾಗುತ್ತದೆ.

ಆದರೆ ಹೆಣ್ಣು ಮಕ್ಕಳಿಗೆ ಹೃದಯಾಘಾತವಾದಾಗ ಉಸಿರಾಡಲು ಸಮಸ್ಯೆಯಾಗುತ್ತದೆ. ಉಸಿರುಕಟ್ಟಿದ ಹಾಗಾಗುತ್ತದೆ. ಹೆಚ್ಚು ಬೆನ್ನು ನೋವು ಕಾಣಿಸುತ್ತದೆ. ಹಾಗಾಗಿ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿ ಅಂತಾರೆ ವೈದ್ಯರು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author