Thursday, October 2, 2025

Latest Posts

ಮಳೆ ಹಾನಿ ಸಮೀಕ್ಷೆಗೆ ಹೊರಟ CM, BJP

- Advertisement -

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೆರೆ ಪ್ರದೇಶದಲ್ಲಿ ಸೆಪ್ಟೆಂಬರ್‌ 30ರಂದು ಸಿಎಂ ಸಿದ್ದರಾಮಯ್ಯ, ವೈಮಾನಿಕ ಸಮೀಕ್ಷೆ ಸಾಧ್ಯತೆ ಇದೆ.

ಮತ್ತೊಂದೆಡೆ, ರಾಜ್ಯ ಬಿಜೆಪಿಗರ ನಿಯೋಗ ಕೂಡ, ಸೆಪ್ಟೆಂಬರ್‌ 29ರಿಂದಲೇ ಪ್ರವಾಹ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ನೇತೃತ್ವದಲ್ಲಿ, ಪಕ್ಷದ ಮುಖಂಡರನ್ನು ಒಳಗೊಂಡ ಎರಡೂ ತಂಡಗಳನ್ನು ರಚಿಸಲಾಗಿದೆ.

ಬಿ.ವೈ. ವಿಜಯೇಂದ್ರ ನೇತೃತ್ವದ ತಂಡ ಇಂದಿನಿಂದಲೇ ಪ್ರವಾಸ ಆರಂಭಿಸಲಿದೆ. ಬಿವೈವಿ ತಂಡದಲ್ಲಿ ಛಲವಾದಿ ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಭಗವಂತ ಖೂಬಾ, ಬಿ. ಶ್ರೀರಾಮುಲು, ಡಾ. ಉಮೇಶ್ ಜಾಧವ್‌, ಭಾರತಿ ಶೆಟ್ಟಿ, ಎ.ಎಸ್‌. ಪಾಟೀಲ್ ನಡಹಳ್ಳಿ ಇರಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಬೀದರ್‌, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

ಆರ್‌. ಅಶೋಕ್ ನೇತೃತ್ವದ ತಂಡ ಕಿತ್ತೂರು ಕರ್ನಾಟಕದ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಅಕ್ಟೋಬರ್‌ 3 ಅಥವಾ 4ರಂದು ಭೇಟಿ ಸಾಧ್ಯತೆ ಇದೆ. ಅಶೋಕ್‌ ತಂಡದಲ್ಲಿ ಜಗದೀಶ್ ಶೆಟ್ಟರ್‌, ಸಿ.ಟಿ. ರವಿ, ಅರವಿಂದ್‌ ಬೆಲ್ಲದ, ಪಿ.ಸಿ. ಗದ್ದಿಗೌಡರ್‌, ಈರಣ್ಣ ಕಡಾಡಿ, ಶಶಿಕಲಾ ಜೊಲ್ಲೆ, ಸಿದ್ದು ಸವದಿ, ಅಭಯ್ ಪಾಟೀಲ್‌ ಇರಲಿದ್ದಾರೆ.

ಇನ್ನು, ಸೆಪ್ಟೆಂಬರ್‌ 28ರ ಭಾನುವಾರವೇ ಬೀದರ್‌ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ ನೀಡಿದ್ದಾರೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣರನ್ನು ಭೇಟಿ ಮಾಡಿ, ಒಂದು ತಂಡ ಕಳಿಸಿಕೊಡುವಂತೆ ಕೇಳಿಕೊಳ್ಳುತ್ತೇನೆ. ಕೇಂದ್ರದಿಂದಲೂ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

- Advertisement -

Latest Posts

Don't Miss