Health Tips: ಮೂಲವ್ಯಾಧಿ ಬಂದಾಗ, ಅದು ಹೇಗೆ ಬಂತು..? ಯಾಕೆ ಬಂತು..? ಅದನ್ನು ಹೋಗಲಾಡಿಸಲು ನಾವೇನು ಮಾಡಬೇಕು ಅನ್ನೋ ಬಗ್ಗೆ ಮಾಹಿತಿ ತಿಳಿದಿರಬೇಕು. ರೋಗದ ಬಗ್ಗೆ ತಿಳಿದಾಗಲೇ, ರೋಗ ಬಾರದ ಹಾಗೆ ಏನು ಮಾಡಬೇಕು ಅಂತಾ ತಿಳಿಯೋದು.
ಪ್ರಸಿದ್ಧ ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು, ಮೂಲವ್ಯಾಧಿ ಬಗ್ಗೆ ಮಾತನಾಡಿದ್ದು, ನಾವು ಕುಳಿತ ಜಾಗದಲ್ಲೇ ಹೆಚ್ಚು ಸಮಯ ಕುಳಿತಾಗ, ಮೂಲವ್ಯಾಧಿ ಖಾಯಿಲೆ ಕಾಣಿಸಿಕ“ಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ, ನಮ್ಮ ಆಹಾರದಲ್ಲಿ ಸೊಪ್ಪು, ತರಕಾರಿ, ಕಾಳು, ಹಾಲು, ತುಪ್ಪ, ಮಜ್ಜಿಗೆ, ಮೊಳಕೆ ಕಾಳು, ಇತ್ಯಾದಿ ಇಲ್ಲದಿದ್ದಾಗಲೂ, ಬರೀ ಮಸಾಲೆ ಪದಾರ್ಥಗಳ ಸೇವನೆ, ಬೇಕರಿ ತಿಂಡಿ, ಮೈದಾ, ಸಕ್ಕರೆ ಪ್ರಮಾಣ ಹೆಚ್ಚು ಸೇವನೆ ಮಾಡಿದಾಗಲೇ, ಮೂಲವ್ಯಾಧಿ ಸಮಸ್ಯೆ ಕಂಡು ಬರುತ್ತದೆ ಅಂತಾರೆ ವೈದ್ಯರು.
ಅಲ್ಲದೇ, ಅನುವಂಶಿಕವಾಗಿಯೂ ಮೂಲವ್ಯಾಧಿ ಸಮಸ್ಯೆ ಕಾಣಿಸಿಕ“ಳ್ಳುತ್ತದೆ. ಅಲ್ಲದೇ ಮಾಂಸಾಹಾರ ಸೇವನೆ ಅತೀಯಾದಾಗ, ಮಾಂಸವನ್ನು ಸರಿಯಾಗಿ ಬೇಯಿಸದೇ ಸೇವಿಸಿದಾಗ, ಮೂಲವ್ಯಾಧಿ ಸಮಸ್ಯೆ ಕಾಣಿಸಿಕ“ಳ್ಳುತ್ತದೆ. ಅಲ್ಲದೇ, ನೀರಿನ ಸೇವನೆ ಕೂಡ ಸರಿಯಾಗಿ ಮಾಡದಿದ್ದಲ್ಲಿ ಮೂಲವ್ಯಾಧಿ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಾಗಿ ವೀಡಿಯೋ ನೋಡಿ.




