Web News: ನೀವು ಖುಷಿ ಖುಷಿಯಾಗಿ ವಿದೇಶ ಪ್ರಯಾಣ ಮಾಡಿ, ಭಾರತಕ್ಕೆ ಬಂದಿರಿ. ಅಥವಾ ವಿದೇಶ ಪ್ರಯಾಣಕ್ಕಾಗಿ ಹೋಗುತ್ತಿದ್ದೀರಿ. ಏರ್ಪೋರ್ಟ್ನಲ್ಲಿ ನಿಮ್ಮ ಬ್ಯಾಗ್ನ್ನು ನೀಡಿ, ಅದು ವಾಪಸ್ ನಮ್ಮ ಕೈಗೆ ಸಿಗುವಾಗ, ಅದು ಡ್ಯಾಮೇಜ್ ಆಗಿರುತ್ತದೆ. ಮತ್ತು ಅದರಲ್ಲಿನ ಕೆಲ ವಸ್ತುಗಳು ಮಾಯವಾಗಿರುತ್ತದೆ. ಇದನ್ನು ನೋಡಿ ನಿಮಗೂ ಶಾಕ್ ಆಗುತ್ತದೆ. ಬಳಿಕ ನಿಮಗೆ ಬೇಸರವಾಗುತ್ತದೆ. ಛೇ ಬ್ಯಾಗ್ ಹಾಳಾಯ್ತಲಾ ಅನ್ನೋ ಗೋಳು ಶುರುವಾಗುತ್ತದೆ.
ಆದರೆ ನೀವು ನಿಮ್ಮ ಬ್ಯಾಗ ನೀಡುವ ಮುನ್ನವೇ ಕೆಲ ಕೆಲಸ ಮಾಡದಿದ್ದಲ್ಲಿ, ಈ ರೀತಿ ಗೋಳು ಶುರು ಮಾಡುವ ಅಗತ್ಯವಿಲ್ಲ. ಹಾಗಾದ್ರೆ ಏನು ಆ ಕೆಲಸ ಅಂತೀರಾ. ಅದೇ ನಿಮ್ಮ ಬ್ಯಾಗ್ನ ಫೋಟೋ ತೆಗೆಯುವ ಕೆಲಸ. ನೀವು ಏರ್ಪೋರ್ಟ್ನಲ್ಲಿ ನಿಮ್ಮ ಬ್ಯಾಗ್ ನೀಡುವ ಮುನ್ನ, ಅದರ ಫೋಟೋವನ್ನು ತೆಗೆಯಿರಿ. ಮತ್ತು ಅದರಲ್ಲಿ ಯಾವ ಯಾವ ವಸ್ತು ಇಟ್ಟೀದ್ದೀರಿ ಅಂತಾ ವೀಡಿಯೋ ಮಾಡಿ.
ವಿಮಾನಯಾನ ಸಂಸ್ಥೆಯವರ ನಿಶ್ಕಾಳಜಿಯಿಂದ ನಿಮ್ಮ ಬ್ಯಾಗ್ ಡ್ಯಾಮೇಜ್ ಆದರೆ, ಅಥವಾ ನಿಮ್ಮ ಬ್ಯಾಗ್ನಲ್ಲಿರುವ ವಸ್ತು ಕಾಣೆಯಾದರೆ, ಅದಕ್ಕೆ ಆ ವಿಮಾನಯಾನ ಸಂಸ್ಥೆಯವರು ಪ್ರಯಾಣಿಕನಿಗೆ 20 ಸಾವಿರ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ. ಹೀಗೆ ಡ್ಯಾಮೇಜ್ ಆದ ಬ್ಯಾಗ್ ನಿಮ್ಮದಾಗಿದ್ದು, ನಿಮಗೂ ಪರಿಹಾರ ಸಿಗಬೇಕು ಅಂದ್ರೆ ನಿಮ್ಮ ಬಳಿ ಪ್ರೂಫ್ ಇರಬೇಕು.




