- Advertisement -
ಬೆಳ್ಳಿತೆರೆ-ಕಿರುತೆರೆ ಎರಡರಲ್ಲೂ ಮಿಂಚುವ ಸ್ಟಾರ್ ಜೆಕೆ ಖ್ಯಾತಿಯ ಜಯರಾಮ್ ಕಾರ್ತಿಕ್. ಕೇವಲ ಕನ್ನಡ ಮಾತ್ರವಲ್ಲ ಹಿಂದಿ ಕಿರುತೆರೆಯಲ್ಲೂ ಜೆಕೆಗೆ ಒಳ್ಳೆ, ನೇಮ್-ಫೇಮ್ ಇದೆ. ಸೀಯಾ ಕಾ ರಾಮ್ ಸೀರಿಯಲ್ ನಲ್ಲಿ ರಾವಣನಾಗಿ ಅಬ್ಬರಿಸಿದ ಜಯ್ ರಾಮ್ ನಟನೆಗೆ ಬಾಲಿವುಡ್ ಮಂದಿ ಫಿದಾ ಆಗಿದ್ರು.

ಇದೇ ಸೀರಿಯಲ್ ಈಗ ಕನ್ನಡಕ್ಕೂ ಡಬ್ ಆಗಿ ಆಗಿ ಪ್ರಸಾರವಾಗ್ತಿದೆ. ಆ ಧಾರಾವಾಹಿ ಡಬ್ಬಿಂಗ್ ನಲ್ಲಿ ಜೆಕೆ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಜೆಕೆ ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ.
ಕಾಸ್ಟ್ಲಿ ಕಾರು ಖರೀದಿಸಿದ ನಟ
ಜೆಕೆಗೆ ಕಾರುಗಳೆಂದ್ರೆ ಅಚ್ಚುಮೆಚ್ಚು. ಅದರಲ್ಲೂ ಲ್ಯಾಬೋರ್ಗಿನಿ ಕಾರು ಅಂದ್ರೆ ಎಲ್ಲಿಲ್ಲದ ಪ್ರೀತಿ. ತುಂಬಾ ದಿನಗಳಿಂದ ಲ್ಯಾಬೋರ್ಗಿನಿ ಕಾರು ಖರೀದಿಸಲು ಪ್ಲಾನ್ ಹಾಕಿಕೊಂಡಿದ್ದರು. ಅದರಂತೆ ಜೆಕೆ ದುಬಾರಿ ಬೆಲೆಯ ಲ್ಯಾಬೋರ್ಗಿನಿ ಕಾರು ಖರೀದಿ ಮಾಡಿದ್ದಾರೆ.


- Advertisement -

