ಕನ್ನಡ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮನಸು ಗೆದ್ದಿರುವ ಸೀರಿಯಲ್ ಗಳ ಪೈಕಿ ಕನ್ನಡತಿ ಸೀರಿಯಲ್ ಕೂಡ ಒಂದು. ಈ ಸೀರಿಯಲ್ ನಲ್ಲಿ ಹರ್ಷ-ಭೂಮಿ ನಟನೆಯಂತೂ ವೀಕ್ಷಕರ ಮನಸು ಸೂರೆಗೊಳಿಸಿದೆ. ಅದ್ರಲ್ಲೂ ಕನ್ನಡ ಟೀಚರ್ ಭೂಮಿ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆ ಪಾತ್ರಾಧಾರಿ ರಂಜನಿ ರಾಘವನ್ ಇಂದು ಕಿರುತೆರೆ ಲೋಕದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಇದೇ ರಂಜನಿ ಈಗ ಲೋಕಲ್ ಅಖಾಡಕ್ಕೆ ಧುಮುಕಿದ್ದಾರೆ.
ಅರೇ ರಂಜನಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತಿದ್ದಾರಾ ಅಂತಾ ಆಶ್ಚರ್ಯರಾಗ್ಬೇಡಿ. ಭೂಮಿ ಎಲೆಕ್ಷನ್ ನಿಂತಿಲ್ಲ. ಬಟ್ ಎಲೆಕ್ಷನ್ ನಿಂತ ಅಭ್ಯರ್ಥಿ ಪರ ಮತಬೇಟೆ ಮಾಡ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಿಗಿರಿ ತಾಲೂಕಿನ ಗಿರಿಸಾಗರ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ರು. ಬಿರು ಬಿಸಿಲು ಲೆಕ್ಕಿಸದೇ ರಂಜನಿ ಗ್ರಾಮಗಳ ಬೀದಿಯಲ್ಲಿ ಸಂಚರಿಸಿ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿದ್ರು. ಈ ವೇಳೆ ರಂಜನಿ ನೋಡಲು ಜನ ಮುಗಿ ಬಿದ್ದರು.