Saturday, February 15, 2025

Latest Posts

ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ ಸಂಘಟನೆ ನಾಯಕ ಹಸನ್ ನಸ್ರಲ್ಲಾ ಹ*ತ್ಯೆ

- Advertisement -

International News: ಬೈರುತ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ ಸಂಘಟನೆ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಮಿಲಿಟರಿ ಪಡೆ ಘೋಷಿಸಿದೆ.

ಇಸ್ರೇಲ್ ಜೆಟ್‌ಗಳು ರಾತ್ರಿಯಿಡೀ ದಕ್ಷಿಣ ಬೈರುತ್‌ನಲ್ಲಿ ಹಿಜ್ಬುಲ್ ಸಂಘಟನೆಯ ಉಗ್ರರು ತಂಗಿರುವ ಜಾಗದ ಮೇಲೆ ಸತತವಾಗಿ ಬಾಂಬ್ ದಾಳಿ ಮಾಡಿ, ವಸತಿ ಕಟ್ಟಡಗಳನ್ನು ನೆಲಸಮಗೊಳಿಸಿತ್ತು. ಈ ವೇಳೆ ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ. ಅವರಲ್ಲಿ ಹಿಜ್ಬುಲ್ ಸಂಘಟನೆಯ ನಾಯಕ ಹಸನ್ ನಸ್ರಲ್ಲಾ ಮತ್ತು ಆತನ ಮಗಳೂ ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಉತ್ತರಇಸ್ರೇಲ್‌ಗೆ ರಾಕೇಟ್ ಉಡಾವಣೆ ಮಾಡಬೇಕು. ಕೆಲ ದಿನಗಳ ಹಿಂದೆ ಇಸ್ರೇಲ್ ನಡೆಸಿದ್ದ ದಾಳಿಗೆ, ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ನಿರ್ಧರಿಸಿದ ಕೆಲ ಗಂಟೆಗಳಲ್ಲೇ ಇಸ್ರೇಲ್ ಈ ವೈಮಾನಿಕ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

- Advertisement -

Latest Posts

Don't Miss