ಸಿದ್ದು – ಡಿಕೆಶಿ ಫೈಟ್ ನಡುವೆ ಹೈಕಮಾಂಡ್ ಕ್ಲೈಮ್ಯಾಕ್ಸ್!?

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಥಾನದಲ್ಲಿ ಮುಂದುವರಿಸಲು ಅಹಿಂದ ಸಮುದಾಯದ ಸಚಿವರು ಹೈಕಮಾಂಡ್ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಮಾತ್ರ ಹೈಕಮ್ಯಾಂಡ್ ತೀರ್ಮಾನಕ್ಕೆ ಬದ್ದ ಎಂದಿದ್ದಾರೆ. ಹಾಗಾದರೇ ಹೈಕಮ್ಯಾಂಡ್ ತೀರ್ಮಾನವೇನು? ಅನ್ನೋ ಪ್ರಶ್ನೆ ಕುತೂಹಲ ಕೆರಳಿಸಿದೆ.

ಸಿದ್ದರಾಮಯ್ಯ ಕ್ಯಾಬಿನೆಟ್‌ನ ಅಹಿಂದ ಸಚಿವರು ಮಂಗಳವಾರ ಸಿಎಂರನ್ನು ಭೇಟಿ ಮಾಡಿ, ಯಾವುದೇ ಸಂದರ್ಭದಲ್ಲೂ ಮುಖ್ಯಮಂತ್ರಿಯ ಸ್ಥಾನ ತ್ಯಜಿಸಬಾರದು ಎಂಬ ತಮ್ಮ ಒತ್ತಾಯವನ್ನು ಪುನರುಚ್ಚರಿಸಿದ್ದಾರೆ.
ನಾವು ಎಲ್ಲರೂ ನಿಮ್ಮೊಂದಿಗಿದ್ದೇವೆ, ಯಾವುದೇ ಕಾರಣಕ್ಕೂ ಗಾದಿ ಬಿಡಬೇಡಿ ಎಂದು ಸಚಿವರು ಸಿಎಂಗೆ ತಿಳಿಸಿದ್ದಾರೆ.

ಇದೇ ವೇಳೆ, ಸಿದ್ದರಾಮಯ್ಯ ಪರ ಬೆಂಬಲಿಗ ಶಾಸಕ–ಸಚಿವರು ಹೈಕಮಾಂಡ್‌ ಮುಂದೆ ಪೆರೇಡ್ ಮಾಡುವ ತೀರ್ಮಾನ ಕೈಗೊಂಡಿದ್ದು, ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ತಮ್ಮ ನಿಲುವನ್ನು ವ್ಯಕ್ತಪಡಿಸಲು ಸಿದ್ಧರಾಗಿದ್ದಾರೆ.

ಬೆಂಗಳೂರುದಲ್ಲಿ ತಮ್ಮ ಆಪ್ತರೊಂದಿಗೆ ಇಂದಿನ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಕಾಂಗ್ರೆಸ್ ಹೈಕಮಾಂಡ್ ಹೇಳಿದಂತೆ ನಡೆಯುತ್ತೇನೆ. ಹೈಕಮಾಂಡ್ ಏನು ತೀರ್ಮಾನಿಸುತ್ತದೆಯೋ ಅದಕ್ಕೆ ಸಂಪೂರ್ಣ ಬದ್ದ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ, ಇದೀಗ ಅಂತಿಮ ನಿರ್ಧಾರ ಕೇವಲ ಹೈಕಮಾಂಡ್‌ ಕೈಯಲ್ಲಿರುವುದೂ ಸ್ಪಷ್ಟವಾಗಿದೆ.

ಡಿಕೆಶಿ ಬಣದ ಚಟುವಟಿಕೆಗಳಿಗೆ ಪ್ರತಿತಂತ್ರ ರೂಪಿಸುತ್ತಿರುವ ಸಿಎಂ ಪರ ಬಳಗಕ್ಕಾಗಿ, ಈಗ ಮೂಲ ಪ್ರಶ್ನೆ ಹೈಕಮಾಂಡ್‌ನ ಅಂತಿಮ ತೀರ್ಮಾನ ಏನು? ಅನ್ನೋದು ಉಭಯ ಪಾಳಯಗಳ ಚಟುವಟಿಕೆಯಿಂದ ಕಾಂಗ್ರೆಸ್ ರಾಜ್ಯ ಘಟಕದಲ್ಲಿ ನಾಯಕತ್ವದ ರಾಜಕೀಯ ಚರ್ಚೆ ಚುರುಕುಗೊಂಡಿದ್ದು, ಹೈಕಮಾಂಡ್ ತೀರ್ಮಾನವೇ ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author