ಕರ್ನಾಟಕ ಟಿವಿ : ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ ಸುಧಾಕರ್ ಪದವಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಸುಧಾಕರ್ ನೇಮಕಾತಿಯೇ ಅಕ್ರಮ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್ ಒಕಾ ಅಭಿಪ್ರಾಯ ಪಟ್ಟಿದ್ದಾರೆ. ಇಡೀ ನೇಮಕಾತಿ ಪಾರದರ್ಶಕವಾಗಿಲ್ಲ ಹೀಗಾಗಿ ನೇಮಕ ಆದೇಶವೇ ರದ್ದಾಗಬೇಕು ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಆಂಜನೇಯ ರೆಡ್ಡಿ ಎನ್ನುವವರು ಸುಧಾಕರ್ ನೇಮಕ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ರು. ಇನ್ನು ನೇಮಕ ಸಂಬಂಧ ಮರುಪರಿಶೀಲನೆ ನಡೆಸಲು ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸಮಯಾವಕಾಶ ಕೇಳಿದ್ದಾರೆ. ಕೋರ್ಟ್ ನೋಟಿಸ್ ಜಾರಿಯಾದಮೇಲೆ ಅನುಮೋದನೆ ಪಡೆಯಲಾಗಿದ್ದು ಇದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸೆಪ್ಟೆಂಬರ್ 20ರೊಳಗೆ ಸರ್ಕಾರದ ವಿವರಣೆ, ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಟ್ಟಿದ್ದು ಪ್ರಕರಣ ವಿಚಾರಣೆ ಯನ್ನ ಸೆಪ್ಟೆಂಬರ್ 23ಕ್ಕೆ ಮುಂದೂಡಲಾಗಿದೆ. ರಾಜೀನಾಮೆ ನೀಡಿದ ಶಾಸಕರು ಅನರ್ಹ ಶಾಸಕರು ಸಂಕಷ್ಟದಲ್ಲಿದ್ರೆ ಡಾ ಸುಧಾಕರ್ ಮಾತ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಮುಂದುವರೆದಿದ್ರು. ಇದೀಗ ಕೋರ್ಟ್ ಆದೇಶ ಸುಧಾಕರ್ ಗೆ ನಿರಾಸೆ ಮಾಡಿದೆ.