ಎಡ್ಜ್‍ಬಾಸ್ಟನ್ : ನಿನ್ನೆ ಮುಕ್ತಾಯವಾದ ಟಿ20 ಬ್ಲಾಸ್ಟ್ ಟೂರ್ನಿಯ ಫೈನಲ್ ಪಂದ್ಯ ಹಲವಾರು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಹ್ಯಾಂಪ್‍ಶೈರ್ ಮತ್ತು ಲಾಂಕಾಶೈರ್ ಲೈಟ್ನಿಂಗ್ ನಡುವೆ ಅಂತಿಮ ಕದನ ನಡೆದಿತ್ತು.
ಕೊನೆಯ ಎಸೆತದಲ್ಲಿ ಲಾಂಕಾಶೈರ್ ತಂಡಕ್ಕೆ ಗೆಲ್ಲಲು 3 ರನ್ ಬೇಕಿತ್ತು. ಹ್ಯಾಂಪ್‍ಶೈರ್ ತಂಡದ ವೇಗಿ ನಾಥಾನ್ ಎಲ್ಲಿಸ್ ರಿಚರ್ಡ್ ಗ್ಲೀಸನ್ ಅವರನ್ನು ಬೌಲ್ಡ್ ಮಾಡಿದರು. ಹ್ಯಾಂಪ್‍ಶೈರ್ ತಂಡದ ಆಟಗಾರರು ಗೆದ್ದ ಖುಷಿಯಲ್ಲಿ ವಿಕೆಟ್ ಕಿತ್ತು ಸಂಭ್ರಮಿಸಿದರು.
ಮೈದಾನದಲ್ಲಿ ಸಿಡಿಮದ್ದು ಸಿಡಿಸಲಾಯಿತು. ಅಂಪೈಯರ್ ಕೊನೆಯ ಎಸೆತವನ್ನು ಪರಿಶೀಲಿಸಿದಾಗ ನೋ ಬಾಲ್ ಎಂದು ಸೂಚಿಸಿ ಆಟಗಾರರಿಗೆ ವಾಪಸ್ ಬರುವಂತೆ ಸೂಚಿಸಿದರು. ಹ್ಯಾಂಪ್‍ಶೈರ್ ತಂಡದಲ್ಲಿ ಮೌನ ಆವರಿಸಿತು.
ನಂತರ ಆರಂಭವಾದ ಪಂದ್ಯದಲ್ಲಿ ಲಾಂಕಾಶೈರ್ ತಂಡಕ್ಕೆ ಗೆಲ್ಲಲು 2 ರನ್ ಬೇಕಿತ್ತು. ಆದರೆ ಬ್ಯಾಟರ್ ಹೊಡೆಯುವಲ್ಲಿ ವಿಫಲರಾದರು. ಹ್ಯಾಂಪ್‍ಶೈರ್ ತಂಡ 1ರನ್‍ನಿಂದ ರೋಚಕವಾಗಿ ಗೆದ್ದು 3ನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿತು.