Banglore News : ಬೆಂಗಳೂರು-ಮೈಸೂರು ಹೆದ್ದಾರಿ ಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ನಿರ್ಬಂಧ ಹಿನ್ನಲೆ ‘ಮೊದಲು ಸರ್ವಿಸ್ ರಸ್ತೆಯನ್ನು ಸರಿಯಾಗಿ ಮಾಡಿ ಎಂದು ಸ್ಥಳೀಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಕ್, ಅಟೋ, ಟ್ರ್ಯಾಕ್ಟರ್ ನಿಷೇಧ ಮಾಡಿರುವುದು ಒಳ್ಳೆಯದು. ಆದ್ರೆ, ಮೊದಲು ಸರ್ವಿಸ್ ರಸ್ತೆ ಪೂರ್ಣಗೊಳಿಸಲಿ. ಮಹಾರಾಜರು ಮಾಡಿರುವ ರಸ್ತೆಯನ್ನ ಯಾರು ಬಂದೂ ಉದ್ದಾರ ಮಾಡಬೇಕಾಗಿಲ್ಲ. ಅವರು ಮಾಡಿರುವ ರಸ್ತೆ ನಮಗೆ ಒಳ್ಳೆಯದು. ಮಹಾರಾಜರು ಮಾಡಿ ಬಿಟ್ಟಿರುವ ಕೆಲಸ ಮುಂದುವರೆಸಿಕೊಂಡು ಹೋಗಿ ಎಂದಿದ್ದಾರೆ.
ಇನ್ನು ಈಗಾಗಲೇ ಹೆದ್ದಾರಿಗೆ ಬೈಕ್, ಆಟೋ, ಟ್ರ್ಯಾಕ್ಟರ್ ನಿರ್ಬಂಧ ಹೇರಲಾಗಿದ್ದು, ಆದರೂ, ನಿಯಮ ಮೀರಿ ಬರುವ ವಾಹನಗಳಿಗೆ ರಾಮನಗರ ಪೊಲೀಸರು ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ನಿಯಮ ಮೀರಿ ಹೆದ್ದಾರಿಗೆ ಇಳಿದ ಹಿನ್ನಲೆ ಹೆದ್ದಾರಿಯ ಸಂಗಬಸವನದೊಡ್ಡಿ ಬಳಿ ಪೊಲೀಸರು 500 ರೂಪಾಯಿ ಫೈನ್ ಹಾಕುತ್ತಿದ್ದಾರೆ. ಈ ವೇಳೆ ಇದೊಂದು ಬಾರಿ ಬಿಟ್ಟುಬೀಡಿ ಎಂದು ವಾಹನ ಸವಾರರು ಕೇಳಿಕೊಳ್ಳುತ್ತಿದ್ದು, ಎಷ್ಟೇ ಬೇಡಿಕೊಂಡರೂ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದ್ದಾರೆ ಎನ್ನಲಾಗಿದೆ.
School : ಎಣ್ಮಕಜೆ ಗ್ರಾ.ಪಂ. ಸಾಂತ್ವನ ವಿಶೇಷ ಬಡ್ಸ್ ಶಾಲೆ ನೂತನ ಕಟ್ಟಡ ಉದ್ಘಾಟನೆ
Hostel : ಉಡುಪಿ : ಹಾಸ್ಟೆಲ್ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದ ಸಿಎಂ
Electricity supply : ಉಡುಪಿಯಿಂದ ಕೇರಳಕ್ಕೆ ವಿದ್ಯುತ್ ಪೂರೈಕೆ ಇನ್ನಾ ಗ್ರಾಮದಲ್ಲಿ ಸರ್ವೆಗೆ ತಡೆ