Thursday, December 12, 2024

Latest Posts

Letter : ಸಿಬ್ಬಂದಿ ವೇತನಕ್ಕೆ ಸರ್ಕಾರಕ್ಕೆ ಪತ್ರ : ಶಕ್ತಿ ತುಂಬಲು ಬೇಕಿದೆ 66 ಕೋಟಿ ನೆರವು…!

- Advertisement -

Hubballi News :  ಅದು ಆರ್ಥಿಕ ಸಂಕಷ್ಟದ ನಡುವೆಯೂ ಸಾಗಿದ ಸಾರ್ವಜನಿಕ ಸೇವೆ. ಸರ್ಕಾರದ ಗ್ಯಾರಂಟಿ ಅನುಷ್ಠಾನದಲ್ಲಿಯೂ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಇಲಾಖೆ. ಈಗ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿ ತಲುಪಿದೆ. ಆರ್ಥಿಕ ಶಕ್ತಿ ತುಂಬಲು ಸರ್ಕಾರಕ್ಕೆ ದುಂಬಾಲು ಬಿದ್ದಿದೆ. 

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಗೆಶಕ್ತಿ ತುಂಬಲು ಬೇಕಂತೆ 66 ಕೋಟಿ. ಸಾರಿಗೆ ನೌಕರರ ವೇತನಕ್ಕೆ ಸರ್ಕಾರದ ಮೊರೆ ಹೋಗಿದ್ದು, ಸಚಿವರಿಗೆ ವಾಕರಸಾಸಂ ಎಂಡಿ ಪತ್ರ ಬರೆದಿದ್ದಾರೆ. ಹೌದು..ಉತ್ತರ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಿಬ್ಬಂದಿಗೆ ಜುಲೈ ತಿಂಗಳ ವೇತನ ನೀಡಲು 66 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜೂನ್ ತಿಂಗಳಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡುವಾಗ, ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚವನ್ನು ಭರಿಸುವುದಾಗಿ ಸರ್ಕಾರ ಹೇಳಿತ್ತು. ಜೂನ್ 11 ರಿಂದ 30ರವರೆಗೆ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ 2.50 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಅವರ ಪ್ರಯಾಣದ ವೆಚ್ಚ, ಅಂದಾಜು 66 ಕೋಟಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಸಿಬ್ಬಂದಿ ವೇತನ ನೀಡಲು ಆರ್ಥಿಕ ನೆರವು ನೀಡಲು ಪತ್ರ ಬರೆದಿದ್ದಾರೆ.

ಇನ್ನೂ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಹೊಂದಿರುವ ಈ ಸಂಸ್ಥೆಯಲ್ಲಿ ಬಸ್ ಚಾಲಕರು, ನಿರ್ವಾಹಕರು, ಆಡಳಿತ ವರ್ಗ ಸೇರಿ 21641 ಸಿಬ್ಬಂದಿ ಇದ್ದಾರೆ.ಬಇವರೆಲ್ಲರಿಗೂ ಒಟ್ಟು ವೇತನ ಮಾಡಲು ನೀಡಲು ಪ್ರತಿ ತಿಂಗಳು 87 ಕೋಟಿ ರೂ. ಬೇಕಂತೆ ಇದನ್ನೇ  ಎಂಡಿ ಭರತ್ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಶಕ್ತಿ ಯೋಜನೆಗೂ ಮುನ್ನ ಜೂನ್ 1 ರಿಂದ 10 ರವರೆಗೆ ಸಂಸ್ಥೆಗೆ 47 ಕೋಟಿ ರೂ. ಆದಾಯ ಬಂದಿತ್ತು.

ಆಗ ಪುರುಷರು ಸೇರಿ ಮಹಿಳೆಯರೂ ಹಣ ಕೊಟ್ಟು ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿಯಾದ ಜೂನ್ 11 ರಿಂದ 30ರ ವರೆಗಿನ ಅವಧಿಯಲ್ಲಿ 23 ಕೋಟಿ ಆದಾಯ ಬಂದಿದೆ. ಮಹಿಳೆಯರು ಉಚಿತವಾಗಿ ಪ್ರಯಾಣಿಸಿದರೆ, ಪುರುಷರು ಹಣ ಕೊಟ್ಟು ಪ್ರಯಾಣಿಸಿದ್ದರು. ಒಟ್ಟು ಪ್ರಯಾಣಿಕರಿಂದ ಒಟ್ಟು 70 ಕೋಟಿ ಆದಾಯ ಬಂದಿತ್ತು. ಬೇರೆ ಬೇರೆ ಮೂಲಗಳಿಂದ ಸೇರಿ ಒಟ್ಟು  110 ಕೋಟಿ ಆದಾಯ ಬಂದಿತ್ತು. ಈ ಹಣ ಬಳಸಿಕೊಂಡು, ಸಿಬ್ಬಂದಿಗೆ ಜೂನ್ ಸಂಬಳ ಪಾವತಿಸಲಾಗಿದೆ. ಈಗ ವೇತನ ನೀಡಬೇಕಾದ್ರೆ ಸರ್ಕಾರದ ನೆರವಿನ ಅವಶ್ಯಕತೆ ಇದೆ.

ಒಟ್ಟಿನಲ್ಲಿ ನಿಗಮದಲ್ಲಿ ಇರುವ 4 ಸಾವಿರಕ್ಕೂ ಹೆಚ್ಚು ಬಸ್‌ಗಳಿಗೆ ಪ್ರತಿ ತಿಂಗಳು ಡೀಸೆಲ್ ಹಾಕಲು 80 ಕೋಟಿ ಬೇಕು. ಕಳೆದ ತಿಂಗಳು ಡೀಸೆಲ್‌ಗೆ ಕೊಡಬೇಕಾದ ಸ್ವಲ್ಪ ಹಣ ಉಳಿಸಿಕೊಂಡು, ಸಿಬ್ಬಂದಿಗೆ ಪಾವತಿಸಲಾಗಿದೆ. ಈ ತಿಂಗಳೂ ಸರ್ಕಾರದಿಂದ ಹಣ ಬಾರದಿದ್ದರೆ ಜುಲೈ ತಿಂಗಳದ ಡೀಸೆಲ್ ಮೊತ್ತದ ಬಾಕಿ ಆಗಸ್ಟ್ ತಿಂಗಳಿಗೆ ಮುಂದುವರೆಯಲಿದೆಯಂತೆ.

Highway : ಹೆದ್ದಾರಿ ಹೆಣಗಾಟ….! ಸವಾರರಿಗೆ ಬಿತ್ತು ದಂಡ…?!

School : ಎಣ್ಮಕಜೆ ಗ್ರಾ.ಪಂ. ಸಾಂತ್ವನ ವಿಶೇಷ ಬಡ್ಸ್ ಶಾಲೆ ನೂತನ ಕಟ್ಟಡ ಉದ್ಘಾಟನೆ

Hostel : ಉಡುಪಿ : ಹಾಸ್ಟೆಲ್ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದ ಸಿಎಂ

 

- Advertisement -

Latest Posts

Don't Miss