Political News: ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ಪೂಜೆ ಮಾಡಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ದರ್ಗಾ ಸಮಿತಿ ಅರ್ಜಿಯನ್ನು ತಿರಸ್ಕರಿಸುವ ಮೂಲಕ, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಈ ಮಹತ್ವದ ತೀರ್ಪಿನಿಂದ ಮಹಾಶಿವರಾತ್ರಿ ಪೂಜೆಗೆ ಇದ್ದ ಅಡೆತಡೆಗಳು ದೂರವಾಗಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಆಳಂದದಲ್ಲಿ ಕಳೆದ ಕಳೆದ 400 ವರ್ಷಗಳಿಂದ ನಡೆದುಕೊಂಡು ಬಂದಿದ್ದ ನಿತ್ಯ ಪೂಜೆ ಒಂದೂವರೆ ವರ್ಷದಿಂದ ನಿಲ್ಲಿಸಲಾಗಿದ್ದು, ಅಲ್ಲಿನ ಕೆಲವರು ಚಾದರ್ ಹೊದೆಸುವ ಮೂಲಕ ಲಿಂಗವನ್ನು ಮರೆಮಾಚಿದ್ದಾರೆ ಎನ್ನಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಶಿವರಾತ್ರಿಯಂದು ರಾಘವ ಚೈತನ್ಯ ಪೂಜೆಗೆ ಅನುಮತಿ ನೀಡಿರುವುದು ಸ್ವಾಗತಾರ್ಹವಾಗಿದೆ. ಹಿಂದೂ ಪರಂಪರೆಯನ್ನು ಎಷ್ಟೇ ಮರೆಮಾಚಲು ಯತ್ನಿಸಿದರೂ, ಅದು ನಮ್ಮ ನೆಲದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಭವ್ಯ ಪರಂಪರೆ. ಈ ಹೋರಾಟದಲ್ಲಿ ಯಶಸ್ವಿಯಾಗಿರುವ ಆಳಂದದ ಹಿಂದೂ ಸೋದರರಿಗೆ ಅಭಿನಂದನೆಗಳು ಎಂದಿದ್ದಾರೆ.
ಆಳಂದದಲ್ಲಿ ಕಳೆದ ಕಳೆದ 400 ವರ್ಷಗಳಿಂದ ನಡೆದುಕೊಂಡು ಬಂದಿದ್ದ ನಿತ್ಯ ಪೂಜೆ ಒಂದೂವರೆ ವರ್ಷದಿಂದ ನಿಲ್ಲಿಸಲಾಗಿದ್ದು, ಅಲ್ಲಿನ ಕೆಲವರು ಚಾದರ್ ಹೊದೆಸುವ ಮೂಲಕ ಲಿಂಗವನ್ನು ಮರೆಮಾಚಿದ್ದಾರೆ ಎನ್ನಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಶಿವರಾತ್ರಿಯಂದು ರಾಘವ ಚೈತನ್ಯ ಪೂಜೆಗೆ ಅನುಮತಿ ನೀಡಿರುವುದು ಸ್ವಾಗತಾರ್ಹವಾಗಿದೆ. ಹಿಂದೂ ಪರಂಪರೆಯನ್ನು… pic.twitter.com/fpAHaeSk9v
— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) February 12, 2026




