Thursday, November 13, 2025

Latest Posts

ಫೈನಲ್ ತಲುಪಿ ಇತಿಹಾಸ ಬರೆದ ಭಾರತ ಮಹಿಳಾ ಲಾನ್ ಬೌಲ್ಸ್ ತಂಡ

- Advertisement -

ಬರ್ಮಿಂಗ್‍ಹ್ಯಾಮ್: ಭಾರತದ ಮಹಿಳಾ ಲಾನ್ ಬೌಲ್ಸ್ ತಂಡ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಫೈನಲ್ ತಲುಪಿ ಹೊಸ ಇತಿಹಾಸ ನಿರ್ಮಿಸಿದೆ.

ಮಹಿಳೆಯರ ನಾಲ್ಕನೆ ವಿಭಾಗದ ಸೆಮಿಫೈನಲ್‍ನಲ್ಲಿ  ನ್ಯೂಜಿಲೆಂಡ್ ವಿರುದ್ಧ 16-13 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತು. ಮಹಿಳೆಯರ ನಾಲ್ಕರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಭಾರತ ಫೈನಲ್ ತಲುಪಿದ ಸಾಧನೆ ಮಾಡಿದೆ.

ಆಟಗಾರ್ತಿಯರಾದ ಲವ್ಲಿ ಚೌಬಿ, ಪಿಂಕಿ, ನಯನಮೊನಿ ಸಾಯಿಕಾ ರೂಪಾ ರಾಣಿ ಟಿರ್ಕಿ ಇಂದು ಅಂತಿಮ ಕದನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಭಾರತ 0-5 ಹಿನ್ನಡೆ ಅನುಭವಿಸಿತು. ನಂತರ ತಿರುಗಿ ಬಿದ್ದ  ಭಾರತ ವನಿತೆಯರು ಎಂಡ್ 9 ಹೊತ್ತಿಗೆ 7-7 ಅಂಕ ಸಮಗೊಳಿಸಿತು. ಎಂಡ್ 14ರವರೆಗೂ ನ್ಯೂಜಿಲೆಂಡ ಮೇಲುಗೈ ಸಾಸಿತ್ತು.

ನಂತರ ಭಾರತದ ಟಿರ್ಕಿ ಅವರ ಅಮೋಘ ಹೊಡೆತದ ನೆರೆವಿನಿಂದ ಭಾರತ ಗೆಲುವು ಸಾಧಿಸಿತು.

- Advertisement -

Latest Posts

Don't Miss