Monday, December 23, 2024

Latest Posts

ಆಕ್ಷೇಪಾರ್ಹ ಪದ ಬಳಕೆ ಆರೋಪ: ಕ್ಷಮೆ ಕೇಳಿದ ಶಾಸಕ ಎಸ್ ಕೆ ಸುರೇಶ್..!

- Advertisement -

ಬೇಲೂರು ಶಾಸಕ ಎಚ್.ಕೆ ಸುರೇಶ್‌ರಿಂದ ಆಕ್ಷೇಪಾರ್ಹ ಪದ ಬಳಕೆ ಆರೋಪದ ಕುರಿತು ಸವಿತಾ ಸಮಾಜ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರ ಸಮ್ಮುಖದಲ್ಲಿ ಕೈಮುಗಿದು ಕ್ಷಮೆ ಕೇಳಿದರು.

ಬೇಲೂರು ಶಾಸಕ ಎಚ್.ಕೆ.ಸುರೇಶ್‌ ಆಕ್ಷೇಪಾರ್ಹ ಪದ ಬಳಿಸಿದ್ದರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಇಂದು ಸವಿತಾ ಸಮಾಜ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರ ಸಮ್ಮುಖದಲ್ಲಿ ಕೈಮುಗಿದು ಕ್ಷಮೆ ಕೇಳಿದ್ದಾರೆ. ಜಿಲ್ಲಾ, ರಾಜ್ಯದ ಸವಿತಾ ಸಮಾಜದ ಮುಖಂಡರಲ್ಲಿ ವಿನಂತಿ ಮಾಡುತ್ತೇನೆ. ನಿಷೇಧಿತ ಪದ ಬಳಕೆ ಮಾಡಿರುವುದು ಉದ್ದೇಶಪೂರ್ವಕದಿಂದಲ್ಲ, ಮೃತಪಟ್ಟಿದ್ದ ವ್ಯಕ್ತಿಯ ಕುಟುಂಬದವರ ಸ್ಥಿತಿ ಕಂಡು ಆ ಸಂದರ್ಭದಲ್ಲಿ ಅನಿವಾರ್ಯವಾಗಿ ಪದ ಬಳಕೆ ಮಾಡಿದ್ದೇನೆ. ಬೇಲೂರಿನ ಸವಿತಾ ಸಮಾಜದ ಜೊತೆ ನಾನಿದ್ದೇನೆ. ನಿಷೇಧಿತ ಪದಬಳಕೆ ಮಾಡಿರುವುದು ತಪ್ಪಾಗಿದೆ. ಆದ್ದರಿಂದ ಕ್ಷಮೆ ಕೇಳುತ್ತಿದ್ದೇನೆ ಎಂದರು. ಮುಂದಿನ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ನನ್ನಿಂದಲೇ ತಪ್ಪಾಗಿದೆ, ಮುಂದೆ ಯಾರು ಈ ರೀತಿ ತಪ್ಪು ಮಾಡಬಾರದು, ಇದರ ಬಗ್ಗೆ ಒಂದು ಕಾನೂನು ಆಗಬೇಕೆಂದು ಸದನದಲ್ಲಿ ಒತ್ತಾಯಿಸುತ್ತೇನೆ ಎಂದರು. ಸೆಪ್ಟೆಂಬರ್ 18 ರಂದು ಹೆಬ್ಬಾಳು ಗ್ರಾಮದ ಶಿವಣ್ಣ (63) ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಬೇಲೂರು ಆಸ್ಪತ್ರೆ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದಿದ್ದ ಬೇಲೂರು ಬಿಜೆಪಿ ಶಾಸಕ ಎಚ್.ಕೆ.ಸುರೇಶ್ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಹಾಸನದ ಡಿಎಚ್‌ಓ ಜೊತೆ ಮಾತನಾಡುವಾಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಬರದಲ್ಲಿ ಸವಿತಾ ಸಮಾಜದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಆಕ್ಷೇಪಾರ್ಹ ಪದ ಬಳಕೆಯ ವೀಡಿಯೋ ವೈರಲ್ ಆಗಿತ್ತು. ಶಾಸಕ ಸುರೇಶ್ ಮಾತಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ಶಾಸಕ ಎಚ್.ಕೆ.ಸುರೇಶ್ ತೆರೆ ಎಳೆದಿದ್ದಾರೆ.

ಕಲ್ಲು ತೂರಾಟದಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಎಂಬ ಈಶ್​ವರಪ್ಪ ಹೇಳಿಕೆಗೆ ಟಾಂಗ್ ಕೊಟ್ಟ ಸವದಿ

Rail timing change; ಮೈಸೂರು-ಧಾರವಾಡ ಸೇರಿದಂತೆ 314 ರೈಲುಗಳ ವೇಳಾಪಟ್ಟಿ ಬದಲಾವಣೆ

ಪೇಶಾವರ ಶ್ರೀಗಳ ಹೇಳಿಕೆಗೆ ಅನುಮಾನ ವ್ಯಕ್ತಪಡಿಸಿದ ಸಚಿವ ಸಂತೋಷ್ ಲಾಡ್ ; ಏನದು ಹೇಳಿಕೆ ?

- Advertisement -

Latest Posts

Don't Miss