ಮಹಿಳಾ ಹಾಕಿ ವಿಶ್ವಕಪ್: ಇಂದು ಭಾರತ ಎದುರಾಳಿ ಇಂಗ್ಲೆಂಡ್

ಅಮ್ಸ್‍ತ್ಲೀವನ್ (ನೆದರ್‍ಲ್ಯಾಂಡ್): ಇಂದು ಮಹಿಳಾ ಹಾಕಿ ವಿಶ್ವಕಪ್‍ನಲ್ಲಿ  ಭಾರತ ವನಿತೆಯರ ತಂಡ ತನ್ನ ಮೊದಲ ಪಂದ್ಯದಲ್ಲಿ  ಬಲಿಷ್ಠ ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಸಲಿದೆ.

ಕಳೆದ ಟೋಕಿಯೋ ಒಲಿಂಪಿಕ್ಸ್‍ನಲ್ಲಿ  ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಭಾರತ ವನಿತೆಯರ ತಂಡ ಸೋಲು ಕಂಡು ಪದಕ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. ಇದೀಗ ಆ ಸೇಡನ್ನು ತೀರಿಸಿಕೊಳ್ಳಲು ಹೋರಾಟ ನಡೆಸಲಿದೆ.

ಟೊಕಿಯೋ ಒಲಿಂಪಿಕ್ಸ್‍ನಲ್ಲಿ ಭಾರತ ನಾಲ್ಕನೆ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿತ್ತು.

ವಿಶ್ವ ರ್ಯಾಂಕಿಂಗ್‍ನಲ್ಲಿ ಆರನೆ ಸ್ಥಾನ ಪಡೆದು ಎಫ್ಐಎಚ್ ಪ್ರೊರ ಹಾಕಿ ಲೀಗ್‍ನಲ್ಲಿ ಬೆಲ್ಜಿಯಂ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳಿಗೆ ಸವಾಲು ನೀಡಿತ್ತು.

ಮೊನ್ನೆ ನಡೆದ ಎಫ್ಐಎಚ್ ಪ್ರೊ ಲೀಗ್‍ನಲ್ಲಿ ಭಾರತ ವನಿತೆಯರಯ ಮೂರನೆ ಸ್ಥಾನ ಪಡೆದಿರುವುದರಿಂದ ಆತ್ಮವಿಶ್ವಾಸ ಹೆಚ್ಚಿಸಿದೆ.

ರಾಣಿ ರಾಮಪಾಲ್ ಅವರಿಂದ ನಾಯಕತ್ವ ಪಡೆದಾಗಿನಿಂದ ಸವೀತಾ ಪುಣಿಯಾ ತಂಡವನ್ನು ಚಾಣಕ್ಷತನದಿಂದ ನಿಭಾಯಿಸುತ್ತಿದ್ದಾರೆ. ಶುಶೀಲಾ ಚಾನು, ನೀಹಾ ಗೋಯಲ್, ನವಜೋತ್ ಕೌರ್, ಸೋನಿಕಾ,ಜ್ಯೋತಿ, ನಿಶಾ ಮತ್ತು ಮೋನಿಕಾ ಒಳ್ಳೆಯ ಪ್ರದರ್ಶನ ನೀಡಬೇಕಿದೆ.

 

 

 

 

 

About The Author