ಇತ್ತೀಚೆಗೆ ಸಿನಿ ತಾರೆಯರೆಲ್ಲ ಗಾರ್ಡೆನಿಂಗ್, ಕೃಷಿಯಲ್ಲಿ ತೊಡಗೋದನ್ನ ನಾವು ನೋಡಿದ್ದೇವೆ. ಮಾರುಕಟ್ಟೆಯಿಂದ ಹಣ್ಣು ತರಕಾರಿ ತರೋ ಬದ್ಲು ನಾವೇ ಗಿಡಗಳನ್ನ ನೆಟ್ಟು ಆರ್ಗ್ಯಾನಿಕ್ ಫುಡ್ ತಿನ್ನೋದೆ ಬೆಸ್ಟ್ ಅನ್ನೋದು ಈ ಸಿನಿ ತಾರೆಯರ ಅನಿಸಿಕೆ. ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೋಡೋಣ ಬನ್ನಿ.
ಕೊರೊನಾ ಮಹಾಮಾರಿ ವಕ್ಕರಿಸಿ ದೇಶವೆಲ್ಲ ಲಾಕ್‌ಡೌನ್ ಆಗಿದ್ದ ಸಂದರ್ಭದಲ್ಲಿ ಹಲವರು ಕೆಲಸಕ್ಕೆ ಬ್ರೇಕ್ ತೆಗೆದುಕೊಂಡು ಮನೆಯಲ್ಲಿ ಕೂತರು. ಕೆಲವರು ಮನೆಯಿಂದಲೇ ಆಫೀಸ್ ಕೆಲಸ ಮಾಡಿದರೆ, ಮತ್ತೆ ಕೆಲವರ ಕೆಲಸವೇ ಹೋಯಿತು.
ಆದ್ರೆ ಯಾವ ಕಾಲದಲ್ಲೂ ನಮ್ಮ ಕೈ ಹಿಡಿಯುವುದು ಕೃಷಿ ಎಂಬ ಸತ್ಯವರಿತ ಜನ ಕೃಷಿ ಮಾಡಲಾರಂಭಿಸಿದರು. ನಮ್ಮ ಸ್ಯಾಂಡಲ್ ವುಡ್‌ನ ಉಪೇಂದ್ರ, ನಿಖಿಲ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಹಲವು ಸೆಲೆಬ್ರಿಟಿಗಳು ಕೂಡ ಕೃಷಿಯತ್ತ ವಾಲಿದರೂ.
ಇದೀಗ ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೇ ಫ್ರೀಯಾಗಿದ್ದ ಕೆಲ ಬಾಲಿವುಡ್ ಮಂದಿ ಮನೆಯಲ್ಲೇ ಹೋಮ್ ಗಾರ್ಡೆನಿಂಗ್ ಶುರು ಮಾಡಿದ್ದಾರೆ.
ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ, ಇರ್ಫಾನ್ ಖಾನ್ ಸೇರಿ ಹಲವರು ಹೋಮ್ ಗಾರ್ಡೆನಿಂಗ್ ಆರಂಭಿಸಿದ್ದು, ಪ್ರೀತಿ ಜಿಂಟಾ ಗಾರ್ಡೆನಿಂಗ್ ಹೇಳಿಕೊಟ್ಟ ಅಮ್ಮನಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ನಟಿ ಬಿಪಾಶಾ ಬಸು ಟೊಮೆಟೋ ಗಿಡವನ್ನ ಹೇಗೆ ಬೆಳೆಸಬೇಕು ಅನ್ನೋ ವೀಡಿಯೋವನ್ನ ಅಪ್ಲೋಡ್ ಮಾಡಿದ್ದಾರೆ.
ಇನ್ನು ನಟಿ ಮತ್ತು ಯೋಗಾಪಟುವಾಗಿರುವ ಶಿಲ್ಪಾ ಶೆಟ್ಟಿ ತಾನು ಮಾಡುವ ಹೋಮ್ ಗಾರ್ಡೆನಿಂಗ್ ಬಗ್ಗೆ ಮತ್ತು ಅದರಿಂದಾಗುವ ಲಾಭಗಳ ಬಗ್ಗೆ ಮಗನಿಗೂ ಹೇಳಿಕೊಟ್ಟಿದ್ದಾರೆ. ಸಲ್ಮಾನ್ ಖಾನ್, ನವಾಜುದ್ದಿನ್ ಸಿದ್ಧಿಕಿ ಸೇರಿ ಹಲವು ಧಾರಾವಾಹಿ ನಟ ನಟಿಯರು ಕೂಡಾ ಕೃಷಿ, ಹೋಮ್ ಗಾರ್ಡೆನಿಂಗ್‌ನತ್ತ ಮುಖ ಮಾಡಿದ್ದಾರೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.