ತುಮಕೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಟೆನಿಸ್ ಕ್ರೀಡಾಂಗಣ ನಿರ್ಮಾಣಕ್ಕೆ, ರಾಜ್ಯ ಸರ್ಕಾರ ಮುಂದಾಗಿದೆ. ತುಮಕೂರು ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ, ಕ್ರೀಡಾಂಗಣ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡಲಾಗುತ್ತಿದೆ. ಹೀಗಂತ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಟೆನಿಸ್ ಕ್ರೀಡಾಂಗಣದ ಕನಸು ಕೂಡ ನನಸಾಗಲಿದೆ ಅಂತಾ ಹೇಳಿದ್ರು.
ವಿವಿ ಆವರಣದಲ್ಲಿ ನವೀಕರಿಸಲ್ಪಟ್ಟ ಟೆನಿಸ್ ಕ್ರೀಡಾಂಗಣ ಹಾಗೂ ಆಟಗಾರರ ಕೊಠಡಿ ಉದ್ಘಾಟಿಸಿ ಮಾತನಾಡಿರುವ ಪರಮೇಶ್ವರ್, ಈಗಾಗಲೇ 41 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಹಾಗೂ ಅಕಾಡೆಮಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಸಮೀಪದಲ್ಲೇ 5 ಎಕರೆ ಪ್ರದೇಶವನ್ನು ಟೆನಿಸ್ ಕ್ರೀಡಾಂಗಣ ಹಾಗೂ ಅಕಾಡೆಮಿ ನಿರ್ಮಾಣ ಮಾಡಿದ್ರೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಪಂದ್ಯಾವಳಿಗಳನ್ನು, ನಮ್ಮ ಜಿಲ್ಲೆಯಲ್ಲೇ ಆಯೋಜಿಸಲು ಸಹಕಾರಿಯಾಗಲಿದೆ. ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಮೂಲಕ ಅವರ ಪ್ರತಿಭೆ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರಹೊಮ್ಮಲು ಸಾಧ್ಯವಾಗುತ್ತದೆ.
2003ರಲ್ಲಿ ಶಿಕ್ಷಣ ಸಚಿವನಾಗಿದ್ದಾಗ, ಅಂದಿನ ತುಮಕೂರು ಜಿಲ್ಲಾಧಿಕಾರಿ ಎಂ.ಬಿ. ದ್ಯಾಬೇರಿ ಅವರ ಸಹಕಾರದಿಂದ, ಟೆನಿಸ್ ಕೋರ್ಟ್ ಕ್ರೀಡಾಂಗಣದ ಉದ್ಘಾಟನೆ ಮಾಡಿ, ಟೆನಿಸ್ ಟೂರ್ನಿ ಹಮ್ಮಿಕೊಳ್ಳಲಾಗಿತ್ತು ಅಂತಾ, ಪರಮೇಶ್ವರ್ ಹೇಳಿದ್ದಾರೆ.

