Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಕುಂಭ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.
ಹಣಕಾಸಿನಲ್ಲಿ ಸಮಸ್ಯೆ ಇಲ್ಲದಿದ್ದರೂ, ಸಮಸ್ಯೆ ಇರುವಂತೆ ತೋರುತ್ತದೆ. ದುಡ್ಡಿದ್ದರೂ ಖರ್ಚು ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇರುತ್ತದೆ. ಅವಶ್ಯಕತೆ ಇರುವವರಿಗೆ ವಸ್ತ್ರ ದಾನ ಮಾಡಿ. ಓಂ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ ಎಂದು 21 ಬಾರಿ ಜಪಿಸಿ.
ಗಾಡಿ ಓಡಿಸುವಾಗ ನಿಧಾನವಾಗಿ ಓಡಿಸಿ. ಎಚ್ಚರಿಕೆಯಿಂದಿರಿ. ಯಾವುದೇ ಕಾರಣಕ್ಕೂ ವಾಹನ ಓಡಿಸುವಾಗ, ಪ್ರಯಾಣಿಸುವಾಗ ನಿರ್ಲಕ್ಷ್ಯ ಮಾಡಬೇಡಿ.
4 ಮತ್ತು 7 ಲಕ್ಕಿ ನಂಬರ್. ನೀಲಿ ಮತ್ತು ಕಪ್ಪು ಲಕ್ಕಿ ಕಲರ್. ಶನಿವಾರ ಮತ್ತು ಗುರುವಾರ ಶುಭ ದಿನ.




