Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಕರ್ಕ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.
ಕರ್ಕ ರಾಶಿಯವರಿಗೆ ಈ ವರ್ಷ ಆರ್ಥಿಕ ಸುಧಾರಣೆಯಾಗಲಿದೆ. ಮನೆ ಖರೀದಿಯ ವಿಷಯದಲ್ಲಿ ಈ ವರ್ಷ ಮುನ್ನಡೆ ಸಾಧಿಸಲಿದ್ದೀರಿ. ವಾಹನ ಖರೀದಿ ಯೋಗವೂ ಇದೆ. ನೀರಿಗೆ ಸಂಬಂಧಿಸಿದಂತೆ ಉದ್ಯೋಗ, ಉದ್ಯಮ ಮಾಡಲಿದ್ದೀರಿ.
ಆದರೆ ಮನೆಯಲ್ಲಿ ಘರ್ಷಣೆ ಹೆಚ್ಚಾಗಿರುತ್ತದೆ. ಹಾಗಾಗಿ ಕರ್ಕ ರಾಶಿಯವರು ತಾಳ್ಮೆಯಿಂದ ಇರುವುದು ಉತ್ತಮ. ತಾಳ್ಮೆ ಕಡಿಮೆ ಆದರೆ, ನೆಮ್ಮದಿ ಹಾಳಾಗುವ ಸಾಧ್ಯತೆ ಇರುತ್ತದೆ. ಮೌನವಾಗಿರುವಷ್ಟು ಉತ್ತಮ. ಶಾಂತಿಯಿಂದ ಇದ್ದರೆ ಯಶಸ್ಸು ಸಿಗುವ ಸಾಧ್ಯತೆ ಇರುತ್ತದೆ.
ಸೋಮವಾರ ಈಶ್ವರನ ದೇವಸ್ಥಾನದಲ್ಲಿ ಹಾಲು ಅಥವಾ ತುಪ್ಪ ಅಥವಾ ದದ್ಯ ಅಭಿಷೇಕ ಮಾಡಿದರೆ, ಚಂಚಲ ಸ್ವಭಾವ ಕಡಿಮೆಯಾಗುತ್ತದೆ. ಓಂ ಚಂದ್ರಾಯ ನಮಃ ಎನ್ನುವ ಮಂತ್ರ ಜಪಿಸಬೇಕು. ಲಕ್ಕಿ ನಂಬರ್ 2 ಮತ್ತು 4, ಲಕ್ಕಿ ಕಲರ್ ಬಿಳಿ, ಸೋಮವಾರ ಮತ್ತು ಗುರುವಾರ ಇವರಿಗೆ ಶುಭ ದಿನ.




