Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಮಕರ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.
ಮಕರ ರಾಶಿಯವರಿಗೆ 6 ತಿಂಗಳು ಸಮಸ್ಯೆ ಹೆಚ್ಚಾಗಿರುತ್ತದೆ. ಆರೋಗ್ಯ ಬಾಧೆ ಬಾಧಿಸಲಿದೆ. ಉದರ ಸಮಸ್ಯೆ ಹೆಚ್ಚಾಗಲಿದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಲೇಬೇಕು.
ಶ್ರಮ ಜೀವಿಯಾಗಿರುವ ನಿಮಗೆ ಹಣಕಾಸಿನ ವಿಚಾರದಲ್ಲಿ, ಸಂಸಾರದ ವಿಚಾರದಲ್ಲಿ ಸ್ಥಿರತೆ ಇರುತ್ತದೆ. ಆದರೆ ಆರೋಗ್ಯ ಬಾಧೆ ಬಾಧಿಸುತ್ತದೆ. ಮಾನಸಿನ ಖಿನ್ನತೆ ಆಗಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿ.
ವಾಹನ ಓಡಿಸುವಾಗ ಹುಷಾರಾಗಿ ಗಾಡಿ ಓಡಿಸಿ. ಇನ್ನು ಖಾರದ ಸೇವನೆ ಕಡಿಮೆ ಮಾಡಿ, ದೇಹಕ್ಕೆ ತಂಪು ನೀಡುವ ಆಹಾರ ಸೇವನೆ ಮಾಡುವುದು ಉತ್ತಮ. ನೀರು ಹೆಚ್ಚು ಕುಡಿಯಿರಿ. ಲಕ್ಷ್ಮೀ ನರಸಿಂಹ, ಆಂಜನೇಯನ ಪ್ರಾರ್ಥನೆ ಮಾಡಿ.
ಲಕ್ಕಿ ನಂಬರ್ 8,2, ನೀಲಿ ಮತ್ತು ಬೂದುಬಣ್ಣ ಲಕ್ಕಿ ಕಲರ್, ಶನಿವಾರ-ಬುಧವಾರ ಲಕ್ಕಿ ದಿನ.




