Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಸಿಂಹ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.
ಸಿಂಹ ರಾಶಿಯವರು ನೇತೃತ್ದ ಕೆಲಸ ಮಾಡುವಂಥವರು. ರಾಜಕೀಯ, ಸಮಾರಂಭ ಹೀಗೆ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕ“ಳ್ಳುವ ಜವಾಬ್ದಾರಿ ಉಳ್ಳವರಾಗಿರುತ್ತಾರೆ. 2026 ಇವರಿಗೆ ಅನುಕೂಲವಾಗಿರುವಂಥ ವರ್ಷವಾಗಿರುತ್ತದೆ. ಸ್ನೇಹ ಸಂಬಂಧಗಳು ಉತ್ತಮವಾಗಿರುತ್ತದೆ.
ಆದರೆ ಹಣದ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸಾಲ ನೀಡುವ ಮುನ್ನ ಹಲವು ಬಾರಿ ಈ ರಾಶಿಯವರು ಯೋಚಿಸಬೇಕು. ಏಕೆಂದರೆ, ನೀಡಿದ ಸಾಲ ವಾಪಸ್ ಸಿಗುವ ಸಾಧ್ಯತೆ ಕಡಿಮೆ. ಅಲ್ಲದೇ ಯಾರ ಜತೆಯೂ ಅತೀಯಾದ ಸ್ನೇಹ, ಸಲುಗೆ ಇರದಿದ್ದರೆ ಇನ್ನೂ ಉತ್ತಮ.
ಭಾನುವಾರದ ದಿನ ತಾಮ್ರದ ಪಾತ್ರೆಯಲ್ಲಿ ಕುಂಕುಮ ನೀರಿನಿಂದ ಸೂರ್ಯನಿಗೆ ಅರ್ಘ್ಯ ನೀಡುವುದರಿಂದ ಹಲವು ದೋಷ ನಿವಾರಣೆಯಾಗುತ್ತದೆ. ಸೂರ್ಯ ದೋಷ ನಿವಾರಣೆಯಾಗಿ, ಆರೋಗ್ಯ ಭಾಗ್ಯ ಸಿಗುತ್ತದೆ. ಅಲ್ಲದೇ ಭಾನುವಾರ ಕೆಂಪು ವಸ್ತ್ರ ದಾನ ಮಾಡಬಹುದು.
ಲಕ್ಕಿ ನಂಬರ್ 1 ಮತ್ತು 9, ಲಕ್ಕಿ ಕಲರ್ ಕಿತ್ತಳೆ ಮತ್ತು ಚಿನ್ನದ ಬಣ್ಣ, ಶುಭದಿನ ಭಾನುವಾರ ಮತ್ತು ಮಂಗಳವಾರ.




