ಮನುಷ್ಯನ ಲಕ್ ಯಾವಾಗ ಖುಲಾಯಿಸುತ್ತೋ, ಯಾವಾಗ ಶ್ರೀಮಂತನಾಗ್ತಾನೋ, ಯಾವಾಗ ಬಡವನಾಗ್ತಾನೋ ಹೇಳೋಕ್ಕಾಗಲ್ಲ. ಇಂದು ಸಕಲ ಸಂಪತ್ತು ಹೊಂದಿದ ಶ್ರೀಮಂತ ನಾಳೆ ತಿನ್ನಲೂ ಗತಿ ಇಲ್ಲದಂತವನಾಗಬಹುದು. ಇಂದು ಭಿಕ್ಷೆ ಎತ್ತುವ ಭಿಕ್ಷುವ ನಾಳೆ ಅರಮನೆಯಲ್ಲಿ ಕೂತು ಉಣ್ಣಬಹುದು. ಮನುಷ್ಯನ ಸ್ಥಿತಿಗತಿಗಳು ಡಿಪೆಂಡ್ ಆಗಿರುವುದು, ಅದೃಷ್ಟದ ಮೇಲೆ. ಮುಂಬರುವ ದಿನಗಳಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಅನ್ನೋದನ್ನ ನೋಡೋಣ ಬನ್ನಿ.

ಕನ್ಯಾ ರಾಶಿ: ಕನ್ಯಾರಾಶಿಯವರು ತಮ್ಮ ಕೆಲಸವನ್ನ ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ಯಾರ ಸಹಾಯವೂ ಇಲ್ಲದೇ, ಜೀವನದಲ್ಲಿ ಮುಂದೆ ಬರಲು ಈ ರಾಶಿಯವರು ಪ್ರಯತ್ನಿಸುತ್ತಾರೆ. ಇವರ ಕೆಲಸದಲ್ಲಿರುವ ಶ್ರದ್ಧೆ ಮತ್ತು ಸ್ಪರ್ಧಾತ್ಮಕ ಭಾವನೆಯಿಂದಲೇ ಇವರು ಶ್ರೀಮಂತರಾಗುತ್ತಾರೆ. ಕನ್ಯಾ ರಾಶಿಯವರಿಗೆ ಅದೃಷ್ಟದ ಚಿಹ್ನೆ ಭೂಮಿಯಾಗಿರುವುದರಿಂದ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಇವರಿಗೆ ಯಶಸ್ಸು ಸಿಗುತ್ತದೆ.
ವೃಷ್ಚಿಕ ರಾಶಿ: ಶಿಕ್ಷಣದಲ್ಲಿ ಉತ್ತಮ ಯಶಸ್ಸು ಗಳಿಸುವ ಇವರು ಸ್ಪರ್ಧಾತ್ಮಕ ಮನೋಭಾವನೆ ಉಳ್ಳವರಾಗಿರುತ್ತಾರೆ. ಇವರು ತಾವು ಮಾಡುವ ಕೆಲಸದಲ್ಲಿ ಅತ್ಯಂತ ಪರಿಣಾಮಕಾರಿ ಯಶಸ್ಸನ್ನು ಪಡಿಯುವುದರಿಂದ ಬಹುಬೇಗ ಶ್ರೀಮಂತರಾಗುತ್ತಾರೆ.
ಸಿಂಹ: ರಾಶಿಯ ಹೆಸರಿಗೆ ತಕ್ಕಂತೆ ಸಿಂಹ ರಾಶಿಯವರು ನಾಯಕತ್ವದ ಗುಣ ಉಳ್ಳವರಾಗಿರುತ್ತಾರೆ. ಜವಾಬ್ದಾರಿಯುತ ವ್ಯಕ್ತಿಗಳೆನ್ನಿಸಿಕೊಳ್ಳುವ ಇವರು, ಜೀವನದಲ್ಲಿ ಶ್ರೀಮಂತಿಕೆ ಅನುಭವಿಸುತ್ತಾರೆ. ತುಳಿದು ಬೆಳೆಯುವರಿಗಿಂತ, ಬೆಳೆಸಿ ಬೆಳೆಯುವವನೇ ಉತ್ತಮ ಎಂಬ ವಾಕ್ಯದಂತೆ ನಡೆವ ಇವರು, ತಮ್ಮೊಂದಿಗೆ ಇತರರು ಬೆಳೆಯಲಿ ಎಂದು ಆಶಿಸುತ್ತಾರೆ.
ವೃಷಭ: ವೃಷಭ ರಾಶಿಯವರು ತಮ್ಮ ಭವಿಷ್ಯವನ್ನ ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರಲ್ಲಿರುವ ತಾಳ್ಮೆ ಮತ್ತು ಕೆಲಸದ ಮೇಲಿನ ಆಸಕ್ತಿಯೇ ಇವರನ್ನ ಶ್ರೀಮಂತರನ್ನಾಗಿಸುತ್ತದೆ. ಇನ್ನು ಉಳಿದ ರಾಶಿಯವರಿಗೆ ಹೋಲಿಸುವುದಾದರೆ, ವೃಷಭ ರಾಶಿಯವರು ಹೆಚ್ಚು ಹಣ ಉಳಿಸುತ್ತಾರೆ.
ಕರ್ಕ: ನಾಚಿಕೆ ಸ್ವಭಾವದವರಾದ ಕರ್ಕ ರಾಶಿಯವರು ಕೂಡ ಅನಾವಶ್ಯಕವಾಗಿ ಖರ್ಚುವೆಚ್ಚ ಮಾಡುವುದಿಲ್ಲ. ಉತ್ತಮ ವ್ಯವಹಾರ ಕೌಶಲ್ಯ ಹೊಂದಿರುವ ಇವರು, ಉದ್ಯೋಗ ನಿರ್ವಹಣೆಯನ್ನ ಉತ್ತಮ ರೀತಿಯಲ್ಲಿ ನಿಭಾಯಿಸಿ, ಯಶಸ್ಸು ಕಾಣುವರು.
ಮಿಥುನ: ದುಡ್ಡು ಉಳಿಸೋದ್ರಲ್ಲಿ ಮಿಥುನ ರಾಶಿಯ ವ್ಯಕ್ತಿಗಳು ನಿಸ್ಸೀಮರು. ಅವಶ್ಯಕತೆಗಿಂತ ಹೆಚ್ಚು ಖರ್ಚು ಮಾಡದ ಇವರು ಉಳಿತಾಯ ಮಾಡಿ ಮಾಡಿಯೇ ಶ್ರೀಮಂತರಾಗುತ್ತಾರೆ. ಸಮರ್ಪಣಾ ಭಾವ ಹೊಂದಿರುವ ಇವರು ತಮ್ಮ ಸಮರ್ಪಣೆಯಿಂದಲೇ ಸಮನಾದ ಲಾಭ ಗಳಿಸುತ್ತಾರೆ. ಸಮಸ್ಯೆ ಪರಿಹರಿಸುವುದರಲ್ಲಿ ಉತ್ತಮ ಸಾಮರ್ಥ್ಯ ಹೊಂದಿರುವ ಇವರು, ಓದುವುದು, ಮಾಹಿತಿ ಪಡೆದುಕೊಳ್ಳುವುದರಲ್ಲಿ ಚತುರರಾಗಿರುತ್ತಾರೆ.
ತುಲಾ : ತುಲಾ ರಾಶಿಯ ವ್ಯಕ್ತಿಗಳು ದುಡ್ಡಿಗಿಂತ ಕೆಲಸದಲ್ಲಿ ಹೆಚ್ಚಿನ ಶ್ರದ್ಧೆ ತೋರುತ್ತಾರೆ. ಮಾಡುವ ಕೆಲಸವನ್ನ ಶ್ರಮವಹಿಸಿ ಮಾಡುತ್ತಾರೆ. ಈ ಕಾರಣಕ್ಕೆ ಇವರಿಗೆ ಲಕ್ಷ್ಮಿ ಬೇಗ ಒಲಿಯುತ್ತಾಳೆ. ತಮಗಿಂತ ತಮ್ಮವರ ಖುಷಿ ನೋಡಲು ಇಚ್ಛಿಸುವ ಇವರು, ಗುಣದಲ್ಲಿ ರೋಮ್ಯಾಂಟಿಕ್ ಮತ್ತು ಕಾಳಜಿ ಉಳ್ಳವರಾಗಿರುತ್ತಾರೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.