ವಿಷಪುತ್ರ ಯೋಗವಿದ್ರೆ ಏನೆಲ್ಲಾ ಸಮಸ್ಯೆಯಾಗುತ್ತೆ..? ಪರಿಹಾರ ಏನು? ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ವಿಷಪುತ್ರ ಯೋಗ ಸಂತಾನಫಲ ಹೇಗೆ ಸಂಭವಿಸುತ್ತದೆ ಎಂದು ಹೇಳೋದಾದ್ರೆ, ಆಶ್ಲೇಷ ನಕ್ಷತ್ರ, ಜೇಷ್ಠಾ ನಕ್ಷತ್ರ ಮತ್ತು ವಿಶಾಖ ನಕ್ಷತ್ರ ಈ ಮೂರು ನಕ್ಷತ್ರದಲ್ಲಿ ಜನ್ಮವಾದ್ರೆ ವಿಷಪುತ್ರ ಯೋಗ ಅನ್ನುವಂಥದ್ದು ಉಂಟಾಗುತ್ತದೆ.
ವಿಷಪುತ್ರ ಯೋಗ ಉಂಟಾದ್ರೆ, ಆ ಮಗುವಿನ ಸೋದರಮಾವನಿಗೆ ಕೆಡಕಾಗುವ ಸಂಭವವಿರುತ್ತದೆ. ಅದೇ ರೀತಿ ಸೋದರ ಅತ್ತೆಗೂ ಕೆಡಕಾಗುತ್ತದೆ. ಅಲ್ಲದೇ, ಮಗುವಿಗೂ ಕೆಡಕಾಗುವ ಸಾಧ್ಯತೆ ಇದರುತ್ತದೆ.
ಕೆಲವರಿಗೆ ಮೊದಲ ಮಗು ಹುಟ್ಟಿ ಕೆಲ ದಿನಗಳಲ್ಲೇ ಸಾವನ್ನಪ್ಪುತ್ತದೆ. ಅಲ್ಲದೇ, ನಂತರ ಸಂತಾನ ಭಾಗ್ಯವಿರುವುದಿಲ್ಲ. ಇಂಥವರು ಹಲವು ಪೂಜೆ, ಹೋಮ, ಹರಕೆ ಎಲ್ಲ ರೀತಿಯ ಸೇವೆ ಸಲ್ಲಿಸುತ್ತಾರೆ. ಆದ್ರೆ ಅವರಿಗೆ ಫಲ ಸಿಗುವುದಿಲ್ಲ.
ಅಂಥವರು ಯಾವುದಾದರೂ ವಿಷ್ಣು ಅಥವಾ ಕೃಷ್ಣನಿಗೆ ಸಂಬಂಧಪಟ್ಟ ದೇವಸ್ಥಾನಕ್ಕೆ ಹೋಗಿ, ಅಲ್ಲಿ ಸಿಗುವ ಪಂಚಲೋಹದ ಕೃಷ್ಣನ ವಿಗ್ರಹ ಮನೆಗೆ ತಂದು, ಶುದ್ಧ ಜಲದಲ್ಲಿ ಶುದ್ಧೀಕರಣ ಮಾಡಿ, ಅದಕ್ಕೆ ವಿಶೇಷ ಪೂಜೆ ಮಾಡಬೇಕು. ಮೂರ್ತಿಯ ಎದುರು ತುಪ್ಪದ ದೀಪ ಹಚ್ಚಿ, ತುಳಸಿ ದಳವನ್ನಿಟ್ಟು, ಮೂರ್ತಿಗೆ ಗಂಧವನ್ನ ಹಚ್ಚಿ ಪೂಜೆ ಸಲ್ಲಿಸಬೇಕು. ಹೀಗೆ ಮಾಡಿದ್ದಲ್ಲಿ ವಿಷಪುತ್ರ ಯೋಗ ದೋಷ ಮುಕ್ತಿಯಾಗಿ, ಸಂತಾನ ಫಲ ಪ್ರಾಪ್ತಿಯಾಗುತ್ತದೆ.
